
ಹೊಸನಗರ: ಪಟ್ಟಣದ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಇಂದು ಅಧ್ಯಕ್ಷ ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಸಭೆಯ ಆರಂಭದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ಬಾಕಿ ಇರುವ ಬಾಡಿಗೆ ಎನ್ನ ಶೀಘ್ರವಾಗಿ ಮುಸೂಲಿ ಮಾಡುವಂತೆ ಅಧಿಕಾರಿಗಳಿಗೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಏನ್ ತಿಳಿಸಿದರು ಬಳಿಕ ಮಾತನಾಡಿದ ಸದಸ್ಯ ಸುರೇಂದ್ರ ಕೋಟ್ಯಾನ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯವಿರುವ ತುರ್ತುಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಅಲ್ಲದೆ ಮಳೆಗಾಲ ಸಮೀಪಿಸುತ್ತಿದ್ದು ಅಪಾಯಕಾರಿ ಹಂತದಲ್ಲಿರುವ ಮರಗಳ ತೆರವು ಗೊಳಿಸಲು ಸೂಕ್ತ ಕ್ರಮವನ್ನು ಹಾಗೂ ಮೊದಲ ಮಳೆಯಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಾನಿಯಾದಂತ ಮನೆಗಳಿಗೆ ಪರಿಹಾರವನ್ನು ಶೀಘ್ರವಾಗಿ ನೀಡಬೇಕೆಂದು ಸಭೆಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯಿತಿ ಇಂದ ಹಸ್ತಾಂತರ ಗೊಂಡ ನಿವೇಶನಗಳಿಗೆ ಹೆಚ್ಚುವರಿ ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡದಂತೆ ಸದಸ್ಯ ಅಶ್ವಿನಿ ಕುಮಾರ್ ಆಗ್ರಿಸಿದರು ಜೊತೆಗೆ ಬೀದಿ ದೀಪ ನಿರ್ವಹಣೆ ಸೇರಿ ವಿವಿಧ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮೂಲಕವೇ ನಡೆಯಬೇಕು ಜೊತೆಗೆ ಟೆಂಡರ್ ದಾರನೇ ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಬೇಕು ಇದನ್ನ ಟೆಂಡರ್ ದಾರ ನಿಗೆ ಕಟ್ಟುನಿಟ್ಟಾಗಿ ಸೂಚಿಸುವ ಕೆಲಸ ಆಗಬೇಕು ಎಂದರು .
ಬಳಿಕ ಮಾತನಾಡಿದ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗಪ್ಪ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುಬೇಕೂ ಎಂದು ಅಧಿಕಾರಿಗಳಿಗೆ ಸೂಚಿಸಿದರು ಹಾಗೆಯೇ ಪಟ್ಟಣಕ್ಕೆ ನೀರನ್ನು ಒದಗಿಸುವ ಜಾಕ್ ವೆಲ್ ಬಳಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಈ ಕುರಿತಾಗಿ ಅವುಗಳನ್ನು ನಿಯಂತ್ರಿಸುವ ತಾಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗೆ ಮನವಿಯನ್ನ ಮಾಡಿದ್ದು ಶೀಘ್ರ ಕ್ರಮವನ್ನ ಕೈಗೊಳ್ಳಲಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಉಳಿದಂತೆ ಉದ್ಯಮಿ ಪರವಾನಿಗೆ ಶುಲ್ಕ ಹೆಚ್ಚಳ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ 25-26ನೇ ವಾರ್ಷಿಕ ಟೆಂಡರ್ ಗಳಾದ ಸಂತೆ ಸುಂಕ, ಬಸ್ ವಸೂಲಿ ಸುಂಕ ಮತ್ತು ಖಾಸಗಿ ಬಸ್ ನಿಲ್ದಾಣದ ಮೇಲ್ಚಾವಣಿ ದುರಸ್ತಿ ಹಾಗೂ ವಸತಿಗೃಹ ದುರಸ್ತಿ ಕುರಿತು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಯಿತು...
ಸಂಸದರಿಗೆ ಸಭೆಯಲ್ಲಿ ಅಭಿನಂದಿಸಿದ ಸದಸ್ಯರು.
ಕಲ್ಲು ಹಳ್ಳ ಸಮೀಪ ಇರುವಂತಹ ಸ್ಮಶಾನ ದುರಸ್ತಿ ಕಾಮಗಾರಿ ಅನುದಾನವನ್ನು ನೀಡುವಂತೆ ಸಂಸದರಾದ ಬಿ ವೈ ರಾಘವೇಂದ್ರ ಅವರ ಬಳಿ ಪಟ್ಟಣ ಪಂಚಾಯಿತಿ ಸದಸ್ಯರು ಮನವಿಯನ್ನ ಮಾಡಿದ್ದು ಅದಕ್ಕೆ ಸ್ಪಂದಿಸಿದ ಸಂಸದರು ತಮ್ಮ ವಿಶೇಷ ಅನುದಾನದಲ್ಲಿ ಐದು ಲಕ್ಷ ರೂ ಹಣವನ್ನು ದುರಸ್ತಿ ಕಾಮಗಾರಿಗೆ ಬಿಡುಗಡೆಗೊಳಿಸಿದ್ದು ಅವರಿಗೆ ಸಭೆಯಲ್ಲಿ ಸರ್ವ ಸದಸ್ಯರು ಅಭಿನಂದಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಅಶ್ವಿನಿ ಕುಮಾರ್, ಸುರೇಂದ್ರ ಕೋಟ್ಯಾನ್, ಗುರುರಾಜ್, ಸಿಂಥಿಯಾ ಶೆರಾವೋ, ಗುಲಾಬಿ ಮರಿಯಪ್ಪ , ಗಾಯತ್ರಿ,ಸಿಬ್ಬಂದಿಗಳಾದ ಕಂದಾಯ ನಿರೀಕ್ಷಕ ಮಂಜುನಾಥ್, ಶೃತಿ, ಬಸವರಾಜ್, ಪರಶುರಾಮ್, ಆಸ್ಮಬಾನು, ಗಿರೀಶ್, ಉಮಾಶಂಕರ್, ನೇತ್ರಾವತಿ ರಾಜ್ ಮೊದಲಾದವರು ಇದ್ದರು.
GENERAL ASSEMBLY.
Discover more from Prasarana news
Subscribe to get the latest posts sent to your email.
