
ಹೊಸನಗರ: ಜಿಲ್ಲೆಯಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಪ್ರತಿಷ್ಠಿತ ಸಂಸ್ಥೆ ಎಂದೆನಿಸಿಕೊಂಡಿರುವ ಸಾರ ಸಂಸ್ಥೆ ದಂಬೆಕೊಪ್ಪ ತನ್ನ 10 ವರ್ಷ ಗಳನ್ನು ಪೂರೈಸಿದ್ದು ಈ ನಿಟ್ಟಿನಲ್ಲಿ ಸಂಸ್ಥೆ ಏಪ್ರಿಲ್ 5,6,7 ರಂದು ವಿಶೇಷ ವಿವಿಧ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಾರ ಸಂಸ್ಥೆ 10ವರ್ಷಗಳು ತುಂಬುತ್ತಿರುವ ಈ ಶುಭ ಸಂಧರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಾರ ಸಂಸ್ಥೆಯ ಪ್ರದರ್ಶನಗಾರಗಳ ಉದ್ಘಾಟನೆ, ಏಪ್ರಿಲ್ 5ನೇ ತಾರೀಕು ಸಂಜೆ 4 ಗಂಟೆಗೇ ನೆರವೇರಲಿದೆ ಸಾರ ಸಂಸ್ಥೆ ಜೀರ್ಣೋದ್ಧಾರ ಮಾಡಿದ ಎಲ್ಲಾ ಕೆರೆ ನೀರನ್ನು ತಂದು ಜಲ ಕುಂಭ ಮೆರವಣಿಗೆ ಮೂಲಕ ಗ್ರಾಮಸ್ಥರಿಗೆ ಗೌರವ ಸಮರ್ಪಣೆ ಮಾಡಲಿದೆ. 6ನೇ ತಾರೀಕು ಬೆಳಗ್ಗೆ 10:ಗಂಟೆಗೆ ಸಿನಿಮಾ ನಿರ್ಮಾಣದ ಇಂದಿನ ಸಾಧ್ಯತೆ ಮತ್ತು ಸವಾಲುಗಳು ಕಾರ್ಯಗಾರ ಹಾಗೂ ಮದ್ಯಾಹ್ನ 4 ಗಂಟೆಗೇ ಪರಿಸರ, ಕೃಷಿ ಮತ್ತು ಅರಣ್ಯ ಸಂರಕ್ಷಣೆ ಸಮನ್ವಯ ಸಂವಾದವನ್ನ. 7ನೇ ತಾರೀಕಿನಂದು ಮದ್ಯಾಹ್ನ 4ಗಂಟೆಗೆ ಪರಿಸರ, ಸಂಸ್ಕೃತಿ, ಸಮುದಾಯ ವಿಷಯ ಮಂಡನೆ ನಡೆಯಲಿದೆ.
5,6,7ಪ್ರತಿ ದಿನ ಸಂಜೆ ನಮ್ಮ ಸುತ್ತಮುತ್ತಲೆ ನಿರ್ಮಾಣಗೊಂಡ ಪ್ರಯೋಗ ಮತ್ತು ಕಲಾ ತ್ಮಕ ಸಿನಿಮಾ ಪ್ರದರ್ಶನವನ್ನ ಹಮ್ಮಿಕೊಂಡಿದ್ದು.
5ನೇ ತಾರೀಕು ಸಂಜೆ 7:00ಕ್ಕೆ ಹಕ್ಕಿಗಾಗಿ ಚಿತ್ರ ಪ್ರದರ್ಶನ,ನಿರ್ದೇಶನ ಗಾರ್ಗಿ ಕಾರೆಹಕ್ಲು,
6ನೇ ತಾರೀಕು ಸಂಜೆ 7:00 ಮಧ್ಯಂತರ ಚಿತ್ರ ಪ್ರದರ್ಶನ, ನಿರ್ದೇಶನ ದಿನೇಶ್ ಶೆಣೈ.
7ನೇ ತಾರೀಕು ಸಂಜೆ 7:00 ಸೆಲ್ವಿಯಾ ಎಂಬ ಹುಡುಗಿ ಚಿತ್ರ ಪ್ರದರ್ಶನ, ನಿರ್ದೇಶನ :ನವೀನ್ ಡಿಸೋಜ. ಗಳಿವೆ.
ಜೊತೆಗೆ ಸರ ಸಂಸ್ಥೆಯ 10ರ ಸಂಭ್ರಮದಲ್ಲಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಉಪಸ್ಥಿತರಿದ್ದು ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನಪರಿಷತ್ ಸದಸ್ಯರಾದ ಧನಂಜಯ್ ಸರ್ಜಿ ಹಾಗೂ ಡಿಎಸ್ ಅರುಣ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ ಸಂಸ್ಥೆಯ ಈ ಸಂಭ್ರಮದ ಕಾರ್ಯಕ್ರಮದಲ್ಲೀ ಪಾಲ್ಗೊಳ್ಳುವಂತೆ ಸಂಸ್ಥೆ ಸರ್ವರನ್ನು ಆಹ್ವಾನಿಸಿದೆ..
SELEBRATION:SARA.
Discover more from Prasarana news
Subscribe to get the latest posts sent to your email.
