
ಚಾಮರಾಜನಗರ: ನಗರದ ಶಾಲಾ ಆವರಣದಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಹಠಾತ್ ಕುಸಿದು ಬಿದ್ದು ಸೋಮವಾರ ಮೃತಪಟ್ಟಿದ್ದಾಳೆ. ನಗರದ ಸೇಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿಯ ತೇಜಸ್ವಿನಿ (8) ಮೃತ ಬಾಲಕಿ, ತಾಲೂಕಿನ ಬದನಗುಪ್ಪೆ ಗ್ರಾಮದ ಅಂಗಡಿ ಕುಳ್ಳಪ್ಪನ ಮಗ ಲಿಂಗರಾಜು ಮತ್ತು ಶ್ರುತಿ ಅವರ ಎರಡನೇ ಪುತ್ರಿಯಾದ ಈಕೆ ತರಗತಿಯ ಬಿಡುವಿನ ವೇಳೆಯಲ್ಲಿ ಶಾಲೆ ಆವರಣಕ್ಕೆ ಬಂದಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಗಮನಿಸಿದ ಕ್ರೀಡಾ ಕೋಚ್ ಬೈಕಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಮಗಳನ್ನು ಶಾಲೆಗೆ ಕಳುಹಿಸಿ ದೇವಸ್ಥಾನಕ್ಕೆ ಹೋಗಿದ್ದ ದಂಪತಿ ವಿಷಯ ತಿಳಿಸಿದಾಗ ಆಸ್ಪತ್ರೆಗೆ ದೌಡಾಯಿಸಿದರು. ಮಗಳ ಶವದ ಮುಂದೆ ರೋದಿಸುತ್ತಿದ್ದ ದೃಶ್ಯ ಮನಕಲಕಿತು. ಶಿಕ್ಷಕರು, ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿ ಕಂಬನಿ ಮಿಡಿದರು. ಇಂದು ಬದನಗುಪ್ಪೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ..
CARDIAC ARREST..
Discover more from Prasarana news
Subscribe to get the latest posts sent to your email.
