
ಹೊಸನಗರ : ಸಾಮಾನ್ಯವಾಗಿ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ಬೆಳವಣ ಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಕಳಪೆ ಆಹಾರವು ನಿಮ್ಮ ಕ್ಯಾನ್ಸರ್ ಆಪಾಯವನ್ನು ಹೆಚ್ಚಿಸುತ್ತದೆ ಆಹಾರದೊಂದಿಗೆ ಸಂಬAಧಿಸಿದ ಕ್ಯಾನ್ಸರ್‌ಗಳು ಅನ್ನನಾಳ, ಹೊಟ್ಟೆ ಮತ್ತು ಕರುಳು ಸೇರಿದಂತೆ ಜೀರ್ಣಾಂಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಹಿರಿಯ ವೈದ್ಯಾಧಿಕಾರಿಗಳಾದ ಡಾ. ಪತಂಜಲಿ ಹೇಳಿದರು.
ಕಾರಣಗಿರಿಯಲ್ಲಿ ಗ್ರಾಮಭಾರತಿ ಟ್ರಸ್ಟ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಗ್ರಾಮವಿಕಾಸ ಸಮಿತಿ, ಆರೋಗ್ಯ ಭಾರತಿ ಶಿವಮೊಗ್ಗ, ಮಥುರ ರಜತೋತ್ಸವ ಸಮಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕಾಲಜಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿ ಇವರ ಸಹಕಾರದಲ್ಲಿ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಯೋಗವನ್ನ ಇಡೀ ವಿಶ್ವವೇ ಕೊಂಡಾಡುತ್ತಿದೆ. ಪ್ರತಿದಿನವೂ ಯೋಗ, ಪ್ರಾಣಾಯಾಮದಿಂದ ಕ್ಯಾನ್ಸರ್‌ನಂತಹ ಇನ್ನೂ ಅನೇಕ ರೋಗಗಳಿಂದ ಆರೋಗ್ಯವಾಗಿರಬಹುದು. ಯೋಗದಿಂದ ರೋಗವನ್ನು ದೂರ ಮಾಡಬಹುದು ಎಂದು ಶ್ರೀ ಲಕ್ಷಿö್ಮÃನರಸಿಂಹ ಚಿಕಿತ್ಸಾಲಯದ ವೈದ್ಯೆ ಡಾ. ನಮಿತಾ ಉಡುಪ ಹೇಳಿದರು.
ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕಾಲಜಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿಯ ಅನ್ನಪೂರ್ಣ ಮಾತನಾಡಿ mio ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳು ಮತ್ತು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ಗ್ರಾಮಭಾರತಿ ಟ್ರಸ್ಟ್ನ ಅಧ್ಯಕ್ಷ ಹನಿಯ ರವಿ ಮಾತನಾಡಿ ಭಾರತವನ್ನ ಕ್ಯಾನ್ಸರ್ ಮುಕ್ತ ದೇಶವನ್ನ ಮಾಡಬೇಕು. ಅತ್ಯಂತ ಭಯದ ಸಂಗತಿ ಎಂದರೆ ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುತ್ತಿರುವ ಗಾಳಿ ವಿಷಯುಕ್ತವಾಗಿದೆ. ತಿನ್ನುವ ಆಹಾರಕ್ಕೆಲ್ಲ ವಿಷವನ್ನ ಸಿಂಪಡಿಸಿ ನಮ್ಮ ಆರೋಗ್ಯವನ್ನ ನಾವೇ ಹಾಳುಮಾಡಿಕೊಂಡು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದೇವೆ. ಆದ್ದರಿಂದಲೇ ಆಸ್ಪತ್ರೆಗಳ ಸಂಖ್ಯೆಯೂ ಜಾಸ್ತಿ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಭಾರತಿ ಟ್ರಸ್ಟ್ನ ಗೌರವಾಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ಗಾಮವಿಕಾಸ ಸಮಿತಿಯ ಕೆ. ಎಸ್. ನಳಿನಚಂದ್ರ, ಆರೋಗ್ಯ ಭಾರತಿ ವಿಭಾಗ ಸಂಯೋಜಕರಾದ ಶ್ರೀಧರ್ ಮತ್ತಿತ್ತರರು ಉಪಸ್ಥಿತರಿದ್ದರು.
ದಕ್ಷಿಣ ಪ್ರಾಂತ ಕಾರ್ಯಕಾರಿಣ ಸದಸ್ಯೆ ವೈದ್ಯ ಪಲ್ಲವಿ ಕೆ. ಎಸ್. ನಿರೂಪಿಸಿ, ಹನಿಯ ಗುರುಮೂರ್ತಿ ಪ್ರಾರ್ಥಿಸಿ, ವಿನಾಯಕ ಪ್ರಭು ಸ್ವಾಗತಿಸಿದರು..
CANCER AWARENESS:
Discover more from Prasarana news
Subscribe to get the latest posts sent to your email.
