
ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಪ್ರತಿನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿದ್ದು* ಹೊಸನಗರ ತಾಲ್ಲೂಕು *ಬಸವಾಪುರದ ರೈತ ತಿಮ್ಮಪ್ಪನ ಪ್ರಾಣವನ್ನು ಆನೆಗಳು ಬಲಿ ಪಡೆದಿದ್ದು,ಪ್ರತಿನಿತ್ಯ ರೈತರು ಪ್ರಾಣಭಯದಿಂದ ಓಡಾಡುವ* ಸ್ಥಿತಿ ಎದುರಾಗಿದ್ದು
*ಆನೆಗಳು ರೈತರ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದರು,ರೈತರ ಪ್ರಾಣ ಭಲಿ ಪಡೆಯುತ್ತಿದ್ದರು ಕಣ್ಣಿದ್ದರು ಕುರುಡರ ಹಾಗೆ ವರ್ತಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ, ಆನೆಗಳ ಸ್ಥಳಾಂತರಕ್ಕೆ ಆಗ್ರಹಿಸಿ ಹಾಗೂ ಬೆಳೆನಷ್ಟವಾದ ರೈತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ದಿ-24-01-2025 ರ ಬೆಳಿಗ್ಗೆ 10 ಘಂಟೆಗೆ ಶಿವಮೊಗ್ಗ CCF ಕಛೇರಿ ಎದುರು ಬಿಜೆಪಿ ರಾಜ್ಯ ಉಪಾಧ್ಯಕ್ಷರು,ಮಾಜಿ ಸಚಿವರಾದ
ಹರತಾಳು ಹಾಲಪ್ಪ ರವರ ಸಂಚಾಲಕತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು,ಆನೆ ದಾಳಿಗೊಳಗಾದ ಪ್ರದೇಶಗಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು,ರೈತರು,ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಈ ಪ್ರತಿಭಟನೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ. ರವರು,ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ, ರವರು,ವಿಧಾನ ಪರಿಷತ್ ಸದಸ್ಯರುಗಳಾದ ಡಾ.ಧನಂಜಯ್ ಸರ್ಜಿ, ರವರು,ಡಿ.ಎಸ್ ಅರುಣ್, ರವರು,ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್. ರವರು,ಮಾಜಿ ಶಾಸಕರುಗಳಾದ ಬಿ.ಸ್ವಾಮಿರಾವ್, ಕೆ.ಬಿ ಅಶೋಕ್ ನಾಯ್ಕ,*ಕೆ.ಜಿ ಕುಮಾರಸ್ವಾಮಿ, ರವರು,ಜಿ ಪಂ ಮಾಜಿ ಸದಸ್ಯರಾದ ಹೊನಗೋಡು ರತ್ನಾಕರ್, ರವರು,ಹೊಸನಗರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ, ರವರು, ರೈತ ಮುಖಂಡರು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು,ರೈತರು ಪಾಲ್ಗೊಳ್ಳಲಿದ್ದಾರೆ...
STRIKE:CCF OFFICE...
