
ಸಾಗರ: ಐತಿಹಾಸಿಕ ಸಿಗಂದೂರು ಕ್ಷೇತ್ರಕ್ಕೆ ಸಂಪರ್ಕವನ್ನು ಕಲ್ಪಿಸುವ ದೇಶದ ಎರಡನೆಯ ಅತಿ ಉದ್ದದ ಸೇತುವೆ ಶೀಘ್ರ ಉದ್ಘಾಟನೆ ಗೊಳ್ಳಲಿದೆ ಈ ಕುರಿತಾಗಿ ಸಂಸದರಾದ ಬಿ ವೈ ರಾಘವೇಂದ್ರ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
2019ರ ಮಾರ್ಚ್‌ನಲ್ಲಿ ಕೇಂದ್ರ ಸಚಿವರಾಗಿ ನಿತಿನ್ ಗಡ್ಕರಿ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 450 ಕೋಟಿ ರೂಪಾಯಿ ವೆಚ್ಚದಲ್ಲಿ ಶಂಕುಸ್ಥಾಪನೆ ನಡೆದಿತ್ತು. ಕೇಬಲ್ ಸ್ಟೇ ಬ್ರಿಡ್ಜ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿರುವ ಏಳನೇ ಸೇತುವೆ ಇದಾಗಿದೆ. 2.25 ಕಿಲೋ ಮೀಟರ್ ಉದ್ದದ ಸೇತುವೆಯು ಇದಾಗಿದೆ. ಕಳಸವಳ್ಳಿ ಸಿಗಂದೂರು ಸೇತುವೆಗೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಪ್ರಯತ್ನ ನಡೆದಿತ್ತು ಜೊತೆಗೆ ಆಗಿನ ಶಾಸಕರಾಗಿದ್ದ ಹಾಲಪ್ಪನವರ ಪ್ರಯತ್ನವು ಸಹ ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖವಾಗಿದೆ ಎಂದರು.

ಸದ್ಯ ಸಿಗಂದೂರು ತಲುಪಲು ಲಾಂಚ್ ಮೂಲಕ ತೆರಳಬೇಕಾಗಿದ್ದು, ಈಗ ಸೇತುವೆ ಕಾಮಗಾರಿಯು ಮುಗಿಯುವ ಹಂತಕ್ಕೆ ಬಂದಿದೆ. ಸೇತುವೆ ಕಾಮಗಾರಿ ಪೂರ್ಣ ಗೊಂಡರೆ, ಸುತ್ತಮುತ್ತಲಿನ ನೂರಾರು ಹಳ್ಳಿ ಹಾಗೂ ಸಿಗಂದೂರು ದೇವಾಲಯ ಆಗಮಿಸುವ ಸಾವಿರಾರು ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು ಇನ್ನೇನು ಮೂರ್ನಾಲ್ಕು ತಿಂಗಳ ಒಳಗಾಗಿ ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
SIGANDUR BRIDAG:
Discover more from Prasarana news
Subscribe to get the latest posts sent to your email.
