
ರಿಪ್ಪನ್ ಪೇಟೆ: ನಾಗರಹಳ್ಳಿಯ ಪ್ರಸಿದ್ಧ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಇಂದು ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ತೀರ್ಥಕ್ಷೇತ್ರದಂತೆ ಭಕ್ತರ ಗುಂಪು ನಾಗೇಂದ್ರ ದೇವರ ದರ್ಶನಕ್ಕಾಗಿ ಮುಂಜಾವೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಭಿಷೇಕ, ಪಂಚಾಮೃತ ಸ್ನಾನ, ಹಾಲು, ಸಕ್ಕರೆ,ಅರ್ಚನೆ, ನಾಗಬಲಿ, ಅಷ್ಟನಾಗಾರ್ಚನೆ, ಸರ್ಪಸುಕ್ತ ಪಾರಾಯಣ, ನಾಮಸಂಕೀರ್ತನೆ ಮತ್ತು ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು...
ಮಾಜಿ ಸಚಿವ ಕಿಮ್ಮನೆ ರತ್ನಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಹುಂಚಘಟಕದ ಅಧ್ಯಕ್ಷ ಗುರು ಸುಣ್ಣಕಲ್, ದೇವಸ್ಥಾನ ಸಮಿತಿಯ ವರ್ತೇಶ್ ಗೌಡ ಹುಗಡಿ ಹಾಗೂ ಅನೇಕ ಗಣ್ಯರು ಭಕ್ತರೊಂದಿಗೆ ದೇವರ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಸದಸ್ಯರಾದ ಸತೀಶ್ ಭಟ್ರು, ವೃತ್ತೇಶ ಗೌಡ್ರು, ಕೇಶವ ನಾಗರಹಳ್ಳಿ, ಲಾಯರ್ ರಾಮಚಂದ್ರ, ಇನ್ನಿತರರಿದ್ದರು ಭಕ್ತರಿಗೆ ಪ್ರಸಾದ ವಿತರಣೆ, ಪುಷ್ಪಾಲಂಕೃತ ದೇವರ ದೀಪೋತ್ಸವ ಕಾರ್ಯಕ್ರಮಗಳು ನಡೆದವು.....
HOSANAGARA NEWS..
Discover more from Prasarana news
Subscribe to get the latest posts sent to your email.
