PRASARANANEWS: ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹ: ಅನಾಹುತ ತಡೆ ಜಾಗೃತಿ ಅಭಿಯಾನ.

ಹೊಸನಗರ: ಅಗ್ನಿ ಶಾಮಕ ಮತ್ತು ತುರ್ತು ಸೇವೆ ಹೊಸನಗರ ಇಲಾಖೆಯಿಂದ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಗ್ನಿ ದುರಂತಗಳ ಬಗ್ಗೆ ಸುರಕ್ಷತಾ ಕ್ರಮ ಮತ್ತು ದುರಂತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ತಾಲೂಕಿನ ನಾನಾ ಕಡೆ ನಡೆಸಿದರು.
ಅಗ್ನಿಶಾಮಕ ಠಾಣೆಯಲ್ಲಿ ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮೌನವನ್ನು ಆಚರಿಸುವ ಮೂಲಕ ಗೌರವವನ್ನು ಸಮರ್ಪಿಸಿ
ಹೊಸನಗರ ಪಟ್ಟಣ ಸೇರಿ ತಾಲೂಕಿನ ವಿವಿಧಡೆ ಸಾರ್ವಜನಿಕರನ್ನು ಒಂದೆಡೆ ಸೇರಿಸಿ ಬೆಂಕಿ ಅನಾಹುತ ಉಂಟಾದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇತ್ಯಾದಿಗಳ ಬಗ್ಗೆ  ಮಾಹಿತಿಯನ್ನು ನೀಡಲಾಯಿತು.



ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 2016ನೇ ಸಾಲಿನ ಧ್ಯೇಯ ವಾಕ್ಯವಾದ 'ಅಗ್ನಿ ದುರ್ಘಟನೆ ತಡೆಯೋಣ, ರಾಷ್ಟ್ರದ ಪ್ರಗತಿ ಹೆಚ್ಚಿಸೋಣ' ಕಾರ್ಯಕ್ರಮದಡಿ ನಾಗರಿಕರನ್ನು ಜಾಗೃತಗೊಳಿಸಲು ಕರಪತ್ರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೊಸನಗರ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ಏನ್ ಎಲ್‌ಪಿಜಿ ಸಿಲಿಂಡರ್‌ಗಳ ನಿರ್ವಹಣೆ, ಅಗ್ನಿ ನಂದಕಗಳ ವಿಧಗಳು ಮತ್ತು ಉಪಯೋಗಿಸುವ ಕ್ರಮಗಳು ಇತ್ಯಾದಿಗಳ ಬಗ್ಗೆ ಪಟ್ಟಣದ ಹೋಟೆಲ್, ಅಂಗಡಿ ಮುಂಗ್ಟುಗಳು, ಪೆಟ್ರೊಲ್‌ ಬಂಕ್‌ಗಳಿಗೆ ಭೇಟಿ ನೀಡಿ ಮಾಹಿತಿ ಕುರಿತು ವಿವರಿಸಿದರು. ಕರಪತ್ರಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೇ, ನಾಗರಿಕರು ಅಗ್ನಿ ಅನಾಹುತ ಸಂಭವಿಸಿದಾದ ಯಾವುದೇ ಆತಂಕಕ್ಕೆ ಒಳಗಾಗದೆ ಸಂಯಮದಿಂದ ಇಲಾಖೆ ನೀಡಿರುವ ಸಲಹೆಗಳನ್ನು ಪಾಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ
ಕೆ ಟಿ ರಾಜಪ್ಪ, ರಾಜೇಶ್ ಕೆ ಹೆಚ್, ಜೆ ರವಿ, ಸುರೇಶ್ ಗೌಡ ಸಿ ಪಾಟೀಲ್, ನರೇಶ್ ಎಸ್ ಕಾರ್ವಿ, ಪ್ರವೀಣ್ ಕುಮಾರ್ ಬಿ, ರವೀಂದ್ರ ಕೆ, ಶಿವರಾಜ್, ಮಂಜುನಾಥ್ ಬಿ, ಆಂಜನೇಯ ಬಿಸಿ,ಅಸ್ಪಕ್ ಬಿ, ಮಧು ಎಚ್ ಹಾಗೂ ಶಿಕ್ಷಕರಾದ ಮಂಜುನಾಥ್ ಉಪಸ್ಥಿತರಿದ್ದರು.

PRASARANANEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading