
ಹೊಸನಗರ: ಹೊಸನಗರ ತಾಲೂಕು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡದ್ದೆ ಹೆಚ್ಚು ರಾಜ್ಯಕ್ಕೆ ಬೆಳಕನ್ನು ನೀಡುವ ಸಲುವಾಗಿ ನಿರ್ಮಾಣವಾದ ಅಂತಹ ನಾಲ್ಕು ಡ್ಯಾಮ್ ಗಳಿಂದ ಅದೆಷ್ಟು ಕುಟುಂಬಗಳ ಭೂಮಿಯನ್ನ ಕಳೆದುಕೊಳ್ಳುವಂತಾಯಿತು ಹಾಗೆಯೇ ಜನಸಂಖ್ಯೆ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಲ್ಪಟ್ಟಿತು ಅಲ್ಲದೆ ಅಭಿವೃದ್ಧಿಯಲ್ಲಿ ಒಂದಿಷ್ಟು ಹಿನ್ನಡೆಯನ್ನು ಅನುಭವಿಸುವಂತಾಯಿತು.
ಆದರೆ ಇಲ್ಲಿ ಸಾಹಿತ್ತಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ತನ್ನ ಅಸ್ತಿತ್ವವನ್ನು ಎಂದಿಗೂ ಕಳೆದುಕೊಂಡಿಲ್ಲ.
ಇವುಗಳನ್ನು ಸಾಕ್ಷಿಕರಿಸುವಂತಹ ಬೃಹತ್ ಗ್ರಂಥ ನಮ್ಮೂರ ಕಣಜ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 25-11-2024ರ ಸೋಮವಾರ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೋಚನೆ ಮಾಡಲಾಗಿದೆ ಎಂದು ಕೃತಿಯ ಪ್ರಧಾನ ಸಂಪಾದಕರು ಕೊಡಚಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಕೆ ಶ್ರೀಪತಿ ಹಳಗುಂದ ತಿಳಿಸಿದರು. ಡಾ. ಪಿ ಶಾಂತರಾಮ್ ಪ್ರಭುಗಳು ಗೌರವ ಸಂಪಾದಕರಾಗಿದ್ದಾರೆ
ಸುಮಾರು 75 ಜನ ಲೇಖಕರು 75 ವಿವಿಧ ವಿಷಯಗಳ ಮೇಲೆ ಅಂಕಿ ಅಂಶ ಮಾಹಿತಿ ವಿವರಣೆ ವಿಮರ್ಶೆಯ ಮೂಲಕವಾಗಿ ಕೃತಿಯನ್ನು ರಚಿಸಿದ್ದು 70 ಅಧಿಕ ಲೇಖಕರು ಹೊಸನಗರ ತಾಲೂಕಿನವರೇ ಆಗಿರುವುದು ವಿಶೇಷ.
25 ರಿಂದ 85 ವರ್ಷದ ಲೇಖಕರು ಕಣಜ ಕೃತಿಯ ಭಾಗವಾಗಿದ್ದು ಸತತ ಮೂರು ವರ್ಷಗಳ ಪರಿಶ್ರಮದ ಕಣಜ ಸೋಮವಾರ ಲೋಕಾರ್ಪಣೆಗೊಳ್ಳಲಿದೆ ಎಂಬುದು ಅತ್ಯಂತ ಸಂತಸದ ವಿಷಯವಾಗಿದೆ.

ಕಣಜದೊಳಗಡೆ ಸಾಹಿತ್ಯ ಸಂಗೀತ ಸ್ವಾತಂತ್ರ್ಯ ಹೋರಾಟಗಾರರು ಸೈನಿಕರು ಶಿಕ್ಷಣ ಗ್ರಂಥಾಲಯ ಶಾಸನ ಸಾರಿಗೆ ಸಂಪ್ರದಾಯದ ಸಾಧಕ ಬಾದಕ ಸಹಕಾರ ಸಂಶೋಧನೆ ಮುಳುಗಡೆ ಮಟಾಪರಂಪರೆ ಮಳೆ ಬೆಳೆ ಜನಪದ ಜಾತ್ರೆ ಪರಿಸರ ಪ್ರಕೃತಿ ಪ್ರತಾಪ ಪತ್ರಿಕೋದ್ಯಮ ನಾಣ್ಯ ನಾಗರಿಕತೆ, ದೇವರು ಧರ್ಮ ಇತಿಹಾಸ ಭಾಷಾ ವೈವಿಧ್ಯತೆ ಜೀವವೈವಿಧ್ಯತೆ ಬರಹಗಾರರು ಭೌಗೋಳಿಕತೆ ಭಾಗವತಿಕೆ ಯಕ್ಷಗಾನ ತಾಳ ಪದ್ಧತಿ ಹವಮಾನ ಕ್ರೀಡೆ ಕಲೆ ಚಿತ್ರಕಲೆ ಕರಕುಶಲ ಬುಡಕಟ್ಟು ಕೃಷಿ ಕೋಟೆ ಕೈಗಾರಿಕೆ ರಂಗಭೂಮಿ ರಾಕೆಟ್ ತಯಾರಿಕೆ ಯುವಜನಮೇಳ ವಲಸೆ ನಾಟಿ ವೈದ್ಯರು ಚಳುವಳಿಗಳು ನಿವೇದನೆ ಸಂವೇದನೆ ಸಂದರ್ಶನ ಇತ್ಯಾದಿಗಳನ್ನು ಒಳಗೊಂಡಿದೆ.
ನಾಡಿನ ಖ್ಯಾತ ಲೇಖಕರು ಸಾಂಸ್ಕೃತಿಕ ಚಿಂತಕರು ಆದ ಪ್ರೊಫೆಸರ್ ಕಾಳೇಗೌಡ ನಾಗವಾರ ಮೈಸೂರ್ ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದು ಕೊಪ್ಪದ ನ್ಯಾಯವಾದಿಗಳು ಮತ್ತು ಮಲೆನಾಡು ಮತ್ತು ಕರಾವಳಿ ಜನಪದ ಒಕ್ಕೂಟ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುಧೀರ್ ಕುಮಾರ್ ಮುರೋಳ್ಳಿ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಬೇಲೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.ತಾಲೂಕಿನ ಸಮಸ್ತ ಸಾಹಿತ್ಯ ಆಸಕ್ತರು ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಳ್ಳಬೇಕಾಗಿ ಕೋರಿದರು.
NAMMURA KANAJA
