
ರಿಪ್ಪನ್ ಪೇಟೆ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಕ್ಕೆ 550 ವರ್ಷ ಪೂರ್ಣಗೊಳ್ಳುತ್ತಿರುವ ವಿಶೇಷ ಸಂದರ್ಭದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರು ಗೌಡ ಸಾರಸ್ವತ ಬ್ರಾಹ್ಮಣರಿಗೆ ೫೫೦ ಕೋಟಿ ಶ್ರೀರಾಮ ನಾಮ ಜಪ ಮಾಡುವ ಸಂಕಲ್ಪವನ್ನು ಮಾಡಿಸಿದ್ದರು. ದೇಶಾದ್ಯಂತ ಸಮಾಜದ ಬಂಧುಗಳು ಒಂದು ವರ್ಷ ಜಪ ಕೇಂದ್ರಗಳಲ್ಲಿ ಜಪ ಮಾಡಿದರು.ಅದರಂತೆ ಕರುಣಸಾಗರ ರಾಮಃ ಉಪ ಕೇಂದ್ರವಾದ ರಿಪ್ಪನ್ ಪೇಟೆಯಲ್ಲಿ 1 ಕೋಟಿ ರಾಮ ನಾಮ ಜಪವನ್ನು ಪ್ರಭು ಶ್ರೀರಾಮಚಂದ್ರನಿಗೆ ಸಮರ್ಪಿಸಲಾಗಿದೆ. ದೇಶದ್ಯಂತ ಶ್ರೀರಾಮ ನಾಮ ಜಪ ನಡೆದ ಕೇಂದ್ರಕ್ಕೆ ಶ್ರೀರಾಮ ದಿಗ್ವಿಜಯ ರಥವು ಯಾತ್ರೆ ಕೈಗೊಂಡಿದೆ. ಬದ್ರಿನಾಥ, ಅಯೋಧ್ಯ,ಕಾಶಿ ಯಿಂದ ಗೋವಾದ ಪರ್ತಗಾಳಿ ಗೆ ತೆರಳುವ ರಥವು 120 ಜಪ ಕೇಂದ್ರ ತಲುಪಿ ಕೊನೆಗೆ ಪರ್ತಗಾಳಿಗೆ ತಲುಪುತ್ತದೆ ಮಾರ್ಗದ ನಡುವೆ ಪಟ್ಟಣದ ವಿನಾಯಕ ವೃತ್ತದಲ್ಲಿ ಬ್ರಾಹ್ಮಣ ಸಮಾಜದ ಬಂಧುಗಳು ಮಾತಾ - ಭಗಿನಿಯರು ಶ್ರೀರಾಮ ದಿಗ್ವಿಜಯ ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಯುವಕರು -ಹಿರಿಯರು, ಮಕ್ಕಳೆಲ್ಲ ಸೇರಿ ಶ್ರೀ ರಾಮ ಭಜನೆ ಮಾಡುತ್ತ ಜಯ್ ಶ್ರೀ ರಾಮ್ ಘೋಷಣೆ ಕೂಗುತ್ತಾ ಸ್ವಾಗತಿಸಿದರು ನಂತರ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ರಥವನ್ನು ಬೀಳ್ಕೋಟ್ಟರು. ಸಮಾಜದ ಅಧ್ಯಕ್ಷ ಎನ್.ಗಣೇಶ ಕಾಮತ್ ಮಾತನಾಡಿ ಸಮಾಜದ ಬಂಧುಗಳು ಗುರುಗಳ ಸೂಚನೆಯಂತೆ ಶ್ರೀರಾಮ ನಾಮ ಜಪದಲ್ಲಿ ಭಾಗವಹಿಸಿ ತನು- ಮನ - ಧನ ಎಲ್ಲವನ್ನು ಶ್ರೀರಾಮ ದೇವರಿಗೆ ಸಮರ್ಪಿಸಿದ್ದಿರಿ ಸರ್ವ ಸಮಾಜ ಬಂಧುಗಳ ಭಾಗವಹಿಸುವಿಕೆ ಯಿಂದ ನಮ್ಮ ಕೇಂದ್ರದಿಂದ ಒಂದು ಕೋಟಿ ಜಪ ಸೇವೆಯನ್ನು ಶ್ರೀರಾಮ ದೇವರಿಗೆ ಸಮರ್ಪಿಸಲಾಗಿದೆ ಇದೆ ರೀತಿ ದೇವರ ಸೇವೆಯನ್ನು ಮಾಡೋಣ ಎಂದರು. ಈ ಸಂದರ್ಭದಲ್ಲಿ ಜೆ.ರಾಧಾಕೃಷ್ಣ ರಾವ್,ರಾಮದಾಸ್ ಭಟ್,ಉಮೇಶ್ ಭಟ್, ದೀಪಕ್ ಭಗತ್, ಹರೀಶ್ ಪ್ರಭು, ರಾಮದಾಸ್ ನಾಯಕ್, ಸತೀಶ ಕಿಣಿ,ಅಜಯ್ ಶಾನಭಾಗ್, ವಿಘ್ನೇಶ್ ಪ್ರಭು, ಆದಿತ್ಯ ನಾಯಕ್, ಶುಭಾ ಶಶಿಧರ್ ಪೈ, ಬೆಳ್ಳೂರು ಬಾಬಣ್ಣ, ನರೇಶ್ ಸರಾಫ್, ಅಕ್ಷಯ ಕಾಮತ್ ಮತ್ತಿತರ ವಿಪ್ರ ಬಂಧುಗಳು ಪಾಲ್ಗೊಂಡಿದ್ದರು.
RIPPONPET NEWS
Discover more from Prasarana news
Subscribe to get the latest posts sent to your email.
