
ಹೊಸನಗರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಪಿರ್ಯಾದಿ ಹಾಗೂ ಆರೋಪಿ ನಡುವೆ ರಾಜಿ ಮಾಡಲು ಲಂಚ ಪಡೆಯುವಾಗ ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಮೈಸೂರು ಮೂಲದ ಕೆ.ರವಿ (36) ಬಂಧಿತ. ಇತ್ತೀಚೆಗಷ್ಟೆ ಎಪಿಪಿಯಾಗಿ ಕರ್ತವ್ಯ ಆರಂಭಿಸಿದ್ದರು. ಪ್ರಕರಣ ಇತ್ಯರ್ಥಕ್ಕೆ ರಿಪ್ಪನ್‌ಪೇಟೆ ಕೆರೆಹಳ್ಳಿ ನಿವಾಸಿ ಅಂಜನ್‌ಕುಮಾರ್ ಎಂಬುವರ ಬಳಿ ಮೂರು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅಂಜನ್‌ಕುಮಾರ್ ಲೋಕಾಯುಕ್ತ ಪೊಲೀಸರ ಮೊರೆಹೋಗಿದ್ದರು.
ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
LOKAYUKTA:HOSANAGARA
Discover more from Prasarana news
Subscribe to get the latest posts sent to your email.
