
ರಿಪ್ಪನ್ ಪೇಟೆ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ, ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೋಮವಾರ ಇತಿಹಾಸ ಪ್ರಸಿದ್ಧ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.
ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಪ್ರಥಮ ಬಾರಿಗೆ ನಾನು ಜೇನು ಕಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದೀನಿ. ನಯನ ಮನೋಹರವಾದ ಸುಂದರ ಕಾನನದಲ್ಲಿ ನೆಲೆ ನಿಂತಿರುವ ಜೇನುಕಲ್ಲಮ್ಮ ಮಲೆನಾಡಿಗರ ಆರಾಧ್ಯ ದೈವ ವಾಗಿದೆ, ನನ್ನ ತಂದೆಯವರು ಕೆಲ ದಶಕಗಳ ಹಿಂದೆ ಈ ದೇವಾಲಯಕ್ಕೆ ಆಗಮಿಸಿ ದರುಶನ ಪಡೆದು ದೇವಾಲಯದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿನ ದೇವಾಲಯದ ಅರ್ಚಕರು ನನಗೆ ನೀಡಿದರು ಇದರಿಂದ ನನಗೆ ಸಂತಸವಾಗಿದೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜೇನುಕಲ್ಲಮ್ಮ ದೇವಾಲಯ ಪ್ರದೇಶವನ್ನು ಪ್ರವಾಸ ತಾಣವನ್ನಾಗಿ ರಾಜ್ಯ ಪ್ರವಾಸ ತಾಣದ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಈ ಕ್ಷೇತ್ರಕ್ಕೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ನಾಡಿನ ವ್ಯಾಪ್ತಿಯಲ್ಲಿ ಭಕ್ತರ ಸಮೂಹ ಹರಿದು ಬರುತ್ತಿದ್ದುಪ್ರಕೃತಿಮಡಿನಲ್ಲಿ ನೆಲೆ ನಿಂತಿರುವದೇವಿಯದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆಕ್ಷೇತ್ರದಲ್ಲಿ ಹಂತ ಹಂತವಾಗಿ ಕೇಂದ್ರ ಪ್ರವಾಸೋದ್ಯಮ ಮತ್ತುರಾಜ್ಯ ಪ್ರವಾಸೋಧ್ಯಮಇಲಾಖೆಯಿಂದ ಹೆಚ್ಚಿನಅನುದಾನವನ್ನುತರುವುದರೊಂದಿಗೆ ಪ್ರಕೃತಿಗೆತೊಂದರೆಯಾಗದAತೆ ಪ್ರವಾಸಿಗರಿಗೆ ಯಾತ್ರಿ ನಿವಾಸ ನಿರ್ಮಾಣ ಹಳೆ ಅಮ್ಮನವರ ಮೂಲ ಸ್ಥಳಕ್ಕೆ ಹೋಗಿ ಬರಲುತೊಗು ಸೇತುವೆ ಹೀಗೆ ಹಲವು ಬಗೆಯಲ್ಲಿಅಭಿವೃದ್ದಿಯಕುರಿತು ನೀಲನಕ್ಷೆ ಸಿದ್ದಪಡಿಸಿ ಕೂಡಲೇ ಸರ್ಕಾರದಿಂದಅನುದಾನ ಬಿಡುಗಡೆಗೊಳಿಸುವ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅನುದಾನಕೊಡಿಸುವುದಾಗಿ ಹೇಳಿ ನನ್ನಅವಧಿಯಲ್ಲಿ ಅಮ್ಮನಘಟ್ಟಜೇನುಕಲ್ಲಮ್ಮದೇವಸ್ಥಾನದಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರು.
ಜೇನುಕಲ್ಲಮ್ಮದೇವಸ್ಥಾನದಜಾತ್ರೋತ್ಸವ ಸಮಿತಿಯಕಾರ್ಯಾಧ್ಯಕ್ಷಜಿಲ್ಲಾ ಪಂಚಾಯಿತ್ ಮಾಜಿಅಧ್ಯಕ್ಷಕಲಗೋಡುರತ್ನಾಕರ್ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು ೨೨ ಕೋಟಿರೂ ವೆಚ್ಚದಅಭಿವೃದ್ದಿಕಾಮಗಾರಿಯ ಕ್ರಿಯಾಯೋಜನೆಯ ಪಟ್ಟಿಯನ್ನುಸಿದ್ದಪಡಿಸಲಾಗಿದೆ ಎಂದು ಸಚಿವರಿಗೆ ಮನವಿ ಪತ್ರದ ಮೂಲಕ ವಿವರಿಸಿದರು.
ಸಭೆಯಲ್ಲಿಜಿಲ್ಲಾಕಾಂಗ್ರೆಸ್ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಕೋಡೂರುಗ್ರಾಮ ಪಂಚಾಯಿತ್ಆಧ್ಯಕ್ಷಜೈಪ್ರಕಾಶಶೆಟ್ಟಿ ಚಿಕ್ಕಜೇನಿ ಗ್ರಾಮ ಪಂಚಾಯಿತ್ಆಧ್ಯಕ್ಷಎನ್.ಪಿ.ರಾಜು, ಬ್ಲಾಕ್ಕಾಂಗ್ರೆಸ್ಅಧ್ಯಕ್ಷ ಬಿ.ಜಿ.ಚಂದ್ರುಮೌಳಿಗೌಡ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯರಾಮಚಂದ್ರ,ಗ್ಯಾರಂಟಿ ಸಮಿತಿಅಧ್ಯಕ್ಷಚಿದಂಬರ್,ರಮೇಶ,ಬಿ.ಜಿ.ನಾಗರಾಜ್ಎಂ.ಪಿ.ಸುರೇಶ್, ಆಶಿಫ್ ಬಾಷಾ, ಉಮಾಕರ, ಗವಟೊ ರು ಗಣಪತಿ, ಬಿಎಸ್ಎನ್ಎಲ್ ಶ್ರೀಧರ,ನೇಮಪ್ಪ ಬಂಡಿಇನ್ನಿತರರು ಹಾಜರಿದ್ದರು.
JENUKALLAMMA..
Discover more from Prasarana news
Subscribe to get the latest posts sent to your email.
