CASTE SURVEY:ಜಾತಿ ಈಡಿಗ, ಉಪಜಾತಿ ದೀವರು ನಮೂದಿಸಿ..

ಹೊಸನಗರ:ಜಾತಿ ಹಾಗೂ ಆರ್ಥಿಕ ಸಮೀಕ್ಷಾ ಗಣತಿಯಲ್ಲಿ ಕಾಲಂ ನಂ 9ರಲ್ಲಿ ಜಾತಿ ಈಡಿಗ ಹಾಗೂ ಕಾಲಂ ನಂ 10ರಲ್ಲಿ ಉಪಜಾತಿ ದೀವರು ಎಂದು ನಮೂದಿಸಲು ತಾಲೂಕು ದೀವರ ಯುವ ವೇದಿಕೆ ಸಮಾಜ ಬಾಂಧವರಿಗೆ ತಿಳಿಸಿದೆ.
ಈ ಕುರಿತಾಗಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ದೀವರ ಯುವ ವೇದಿಕೆ ಅಧ್ಯಕ್ಷರಾದ ರಮೇಶ್ ನೇರಲೆ ಜಾತಿ ಗಣತಿಯ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು ಎಂಬುದರ ಬಗ್ಗೆ ಸಮಾಜ ಬಾಂಧವರಲ್ಲಿ ಗೊಂದಲಗಳು ಉಂಟಾಗಬಾರದು ಅಲ್ಲದೆ
ಈ ಸಮೀಕ್ಷೆ ಸಮುದಾಯಗಳ ಶೆಕ್ಷಣಿಕ, ಆರ್ಥಿಕ,ಸಾಮಾಜಿಕ ಸ್ಥಿತಿಗತಿ ಗುರುತಿಸುವಲ್ಲಿ ಪ್ರಮುಖವಾಗಿದ್ದು, ಗಣತಿದಾರರು ಬಂದಾಗ ತಮ್ಮ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಬೇಕು ಕಾಲಂ ನಂ 9 ರಲ್ಲಿ ಈಡಿಗ ಎಂದು ಮತ್ತು ಕಾಲಂ ನಂ 10 ರಲ್ಲಿ ದೀವರು ಎಂದು ನಮೂದಿಸಬೇಕೆಂಬ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ
ಷಣ್ಮುಖ ಯಡಗುಡ್ಡೆ.ಧನಂಜಯ ಮಂಡಾನಿ.ದಿನೇಶ್ ಮಂಡಾನಿ
ಕವೀಶ್ ಕನಸು.ಶಶಿಕುಮಾ‌ರ್ ಶಾಂತನಗದ್ದೆ .ಸುಮಂತ ಕೆ ಉಪಸ್ಥಿತರಿದ್ದರು.

CASTE SURVEY..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe