HOSANAGARA P.P:ಹೊಸನಗರ: ಪ್ರಮುಖ ಪೈಪ್‌ಲೈನ್ ಒಡೆದು ತಿಂಗಳಾದರೂ ಇಲ್ಲ ದುರಸ್ತಿ ಭಾಗ್ಯ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋಲಾಗುತ್ತಿದೆ ಜೀವ ಜಲ..

ಹೊಸನಗರ: ಪಟ್ಟಣದಾದ್ಯಂತ ತೀವ್ರ ಬರಗಾಲದ ಛಾಯೆ ಆವರಿಸುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಆತಂಕ ಎದುರಿಸುತ್ತಿರುವ ಬೆನ್ನಲ್ಲೇ, ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪಟ್ಟಣದ ಪ್ರಮುಖ ಪೈಪ್‌ಲೈನ್ ಸಾಕ್ಷಿಯಾಗಿದೆ. ಹೊಸನಗರ ಪಟ್ಟಣಕ್ಕೆ  ನೀರು ಪೂರೈಸುವ ಪ್ರಮುಖ ಪೈಪ್‌ಲೈನ್ ಒಡೆದು ಹೋಗಿ ತಿಂಗಳು ಕಳೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಇದರಿಂದಾಗಿ ನಿತ್ಯ ಸಾವಿರಾರು ಲೀಟರ್ ಅಮೂಲ್ಯ ಜೀವಜಲ ಪೋಲಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಟ್ಟಣದ ಶರಾವತಿ ಹಿನ್ನಿರಿನಲ್ಲಿರುವ ಜಾಕ್ ವೆಲ್ ನಿಂದ ಪಂಪ ಹೌಸ್ ಗೆ ನೀರು ಸರಬರಾಜು ಮಾಡುವ ಪ್ರಮುಖ ಪೈಪ್ ಲೈನ್ ಒಡೆದು ಹೋಗಿ ತಿಂಗಳುಗಳೆ ಕಳೆದಿದೆ ನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದ್ದು ಈವರೆಗೂ ಅದರ ದುರಸ್ತಿಗೆ ಅಧಿಕಾರಿಗಳು ಮುಂದಾಗದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಕೆ ಸಾಕ್ಷಿಯಾಗಿದೆ.


ಈಗಾಗಲೇ ತಾಲೂಕಿನಲ್ಲಿ  ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು ಶರಾವತಿ ಹಿನ್ನೀರ ಸಂಗ್ರಹಣೆಯು ಸಹ ಅತಿ ಕಡಿಮೆ ಪ್ರಮಾಣದಲ್ಲಿದೆ ಬೇಸಿಗೆ ಆರಂಭಕ್ಕೂ ಮುನ್ನವೇ ಪಟ್ಟಣದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಅದರ ನಡುವೆಯೂ ಈ ರೀತಿ ನಿತ್ಯ ನೀರು ಪೋಲಾಗುತ್ತಿರುವುದು ಇನ್ನಷ್ಟು ನೀರಿನ ಸಮಸ್ಯೆ ಉದ್ಭವಿಸಲು ಪ್ರಮುಖ ಕಾರಣವಾಗಲಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅದರ ದುರಸ್ತಿಗೆ ಮುಂದಾಗಿ ಜೀವ ಜಲ ಪೋಲಾಗುತ್ತಿರುವುದನ್ನು ಸರಿಪಡಿಸಬೇಕಿದೆ.

HOSANAGARA P P..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading