GKB:ಜಾತಿ, ಮತಗಳ ಆಧಾರದ ಮೇಲೆ ಎಂದಿಗೂ ಕೆಲಸ ಮಾಡಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ”

ಹೊಸನಗರ: ಜಾತಿ ಮತ್ತು ಮತಗಳ ಆದರದ ಮೇಲೆ ನಾನು ಎಂದಿಗೂ ಕೆಲಸವನ್ನು ಮಾಡುವುದಿಲ್ಲ  ಅಭಿವೃದ್ಧಿ ಕೆಲಸಗಳು ಸಾರ್ವಜನಿಕರ ಹಿತಾಸಕ್ತಿಗಾಗಿಯೇ ಹೊರತು, ಅಲ್ಲಿ ಜಾತಿ ಮತ್ತು ಮತಗಳಿಗೆ ಎಂದಿಗೂ ನಾನು ಅವಕಾಶವನ್ನು ನೀಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ತಾಲೂಕಿನ ಸೊನಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದವಳ್ಳಿಯಲ್ಲಿ ಗುರುವಾರ ಎರಡು ಕೋಟಿ ರೂ ಅನುದಾನದ ತಡೆಗೋಡೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.


ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾದರೆ ನನಗೆ ಅಲ್ಲಿನ ಜನರ ಹಿತಾಸಕ್ತಿ ಅಷ್ಟೇ ಮುಖ್ಯವಾಗಿರುತ್ತದೆ ಹೊರತಾಗಿ ಜಾತಿ ಮತಗಳನ್ನ ನಾನು ಎಂದಿಗೂ ಪರಿಗಣಿಸುವುದಿಲ್ಲ ಎಂದರು ನನಗೆ ಕ್ಷೇತ್ರದ ಅಭಿವೃದ್ಧಿಯ ಪ್ರಮುಖವಾಗುತ್ತದೆ ಅದರಂತೆ ಆದವಳ್ಳಿ ಗ್ರಾಮದ ಬಹು ವರ್ಷದ ವರ್ಷದ ಬೇಡಿಕೆಯಾದ ತಡೆಗೋಡೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಯನ್ನು ಈ ದಿನ ನೆರವೇರಿಸಿದ್ದು ಈ ಸಣ್ಣ ಗ್ರಾಮವು ಸಹ ನನ್ನ ಕ್ಷೇತ್ರ ವ್ಯಾಪ್ತಿಗೆ ಬರಲಿದೆ ಚುನಾವಣೆ ಸಂದರ್ಭದಲ್ಲಿಯೂ ಸಹ ನಾನು ಇಲ್ಲಿಗೆ ಬಂದಿರಲಿಲ್ಲ ಈ ಭಾಗದ ಮುಖಂಡರು ಬಳಿ ಹಿಂದೆ ಹೇಳಿದ್ದೆ ಯಾವುದಾದರೂ ವಿಶೇಷ ಸಂದರ್ಭದಲ್ಲಿ ನಿಮ್ಮ ಗ್ರಾಮಕ್ಕೆ ಬರುತ್ತೇನೆ ಎಂದು ಇದೀಗ ಆ ದಿನ ಕೂಡಿ ಬಂದಿದ್ದು ಇಲ್ಲಿ ವಾಸಿಸುವ ಮನೆಗಳು ದರೆ ಕುಸಿತದಿಂದ ಬಹಳಷ್ಟು ವರ್ಷಗಳಿಂದ ಆತಂಕದಲ್ಲಿ ಜೀವನವನ್ನು ಸಾಗಿಸುತ್ತಿದ್ದು ಅದಕ್ಕೆ ಈ ದಿನ ಮುಕ್ತಿಯನ್ನು ನೀಡಿದ್ದು ಎರಡು ಕೋಟಿ ಅನುದಾನದಲ್ಲಿ ವ್ಯವಸ್ಥಿತ ತಡೆಗೋಡೆ ನಿರ್ಮಾಣ ವಾಗುತ್ತಿದೆ ಇನ್ನು ನೀವು ನೆಮ್ಮದಿಯಾಗಿ ಈ ಭಾಗದಲ್ಲಿ ವಾಸಿಸಬಹುದು ಎಂದರು.


ಪ್ರಕೃತಿ ವಿಕೋಪ ಅಥವಾ ಭೌಗೋಳಿಕ ಕಾರಣಗಳಿಂದ ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗದಂತೆ ತಡೆಯಲು ಈ ತಡೆಗೋಡೆ ನಿರ್ಮಾಣ ಅತ್ಯಗತ್ಯವಾಗಿತ್ತು. ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಪುರಸ್ಕರಿಸಿ ರೂ. 2 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ, ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿದ್ದು. ಗುಣಮಟ್ಟದ ಕಾಮಗಾರಿ ನಡೆಸಿ ನಿಗದಿತ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸುವುದಾಗಿ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರಮೌಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನ ಕೋಣೆ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಮಾಜಿ ತಾಲೂಕ ಪಂಚಾಯತ್ ಸದಸ್ಯ ಪೂರ್ಣಿಮಾ, ನಾಗೇಶ್, ತಹಸಿಲ್ದಾರ್ ಭರತ್ ರಾಜ್, ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು

GKB....


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading