
ಹೊಸನಗರ: ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 10 ಲಕ್ಷಕ್ಕೂ ಅಧಿಕ ಆದಾಯ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಡಿ ಆರ್ ವಿನಯ್ ಕುಮಾರ್ ತಿಳಿಸಿದರು.
ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ಕಳುರೂ ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿ ಸದಸ್ಯರುಗಳು ನೌಕರರು ವರ್ಗ ಹಾಗೂ ರೈತರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ.
ಕಡಿಮೆ ಮತ್ತು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಲದೆ ಕ್ಷೇತ್ರದ ಶಾಸಕರು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಸಂಘದ ಏಳಿಗೆಯಲ್ಲಿ ಬಹಳಷ್ಟು ಸಹಕಾರವನ್ನು ನೀಡುತ್ತಿದ್ದು ಅವರಿಗೆ ಸಂಸ್ಥೆ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಸಂಘವು ಇದೇ ರೀತಿಯ ಪ್ರಗತಿಯತ್ತ ಸಾಗಲು ಸಂಘದಲ್ಲಿ ಸಾಲ ಪಡೆದ ಪ್ರತಿಯೊಬ್ಬರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದರು ಹಾಗೆಯೇ ಸಂಘದ ನೂತನ ಕಟ್ಟಡ ಉದ್ಘಾಟನೆಯನ್ನು ಶೀಘ್ರವಾಗಿ ಮಾಡಲಿದ್ದು ನಿಮ್ಮೆಲ್ಲರ ಸಹಕಾರದಿಂದ ಈ ಕಾರ್ಯ ಮುಂದೆ ಯಶಸ್ವಿಯಾಗಿ ನಡೆಯಲಿದೆ ಎಂದು ತಿಳಿಸಿದರು. ಹಾಗೆಯೇ ಸಭೆಯಲ್ಲಿ ಸರ್ವ ಸದಸ್ಯರು ಬಹಳಷ್ಟು ಸಲಹೆಗಳನ್ನು ನೀಡಿದ್ದು ಅವುಗಳನ್ನ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಿ ಇರುವಂತಹ ಸಣ್ಣ ಪುಟ್ಟ ಲೋಪದೋಷಗಳನ್ನ ಸದಸ್ಯರೊಂದಿಗೆ ಚರ್ಚಿಸಿ ಸರಿ ಮಾಡಿಕೊಳ್ಳುವುದಾಗಿ ತಿಳಿಸಿದರು ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದಲ್ಲದೆ ಶೈಕ್ಷಣಿಕವಾಗಿ ಸಾಧನೆ ಮಾಡಿದ ಹಲವಾರು ವಿದ್ಯಾರ್ಥಿಗಳನ್ನು ಹಾಗೂ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಶ್ರುತ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಜಿ ಆರ್ ಚಿನ್ನಪ್ಪ ನಿರ್ದೇಶಕರಾದ ರವಿ ಜಿ ಎಸ್. ಮುರಳಿದರ ಕೆ ಆರ್. ಮಹೇಶ್ವರಪ್ಪ ವೈ ಬಿ. ವಿರೂಪಾಕ್ಷ ಎಸ್ ಜಿ. ಹೂವಪ್ಪ ಎಸ್ ಕೆ. ಶ್ರೀನಿವಾಸ ಕುಲಾಯಿ. ಶ್ರೀನಿವಾಸ ಎಚ್. ವನಮಾಲ. ವೇದಾವತಿ. ಈರಮ್ಮ ಉಪಸ್ಥಿತರಿದ್ದರು..
GENERAL BODY MEETING..
Discover more from Prasarana news
Subscribe to get the latest posts sent to your email.
