DEATH NEWS:ಕತ್ರಿಕೊಪ್ಪದ ಗುಂಡಪ್ಪ ನಿಧನ..

ಹೊಸನಗರ: ಅನಾರೋಗ್ಯದ ಹಿನ್ನಲೆಯಲ್ಲಿ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಈಡಿಗ ಜನಾಂಗದ ಕತ್ರಿಕೊಪ್ಪದ   ಕೃಷಿಕ ಗುಂಡಪ್ಪ(80) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ತಲಾ ಎರಡು ಹೆಣ್ಣು ಹಾಗು ಗಂಡು ಮಕ್ಕಳಿದ್ದಾರೆ.

ಮಕ್ಕಳಾದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ,  ಶಿಕ್ಷಕ ಕೆ.ಜಿ. ಪುಟ್ಟಸ್ವಾಮಿ,   ಹೊಸನಗರ ತಾಲೂಕಿನ ಶಿಶು ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ಕೆ.ಜಿ.ಗಾಯತ್ರಿ , ಕೆ.ಜಿ.ಪ್ರಮೀಳಾ, ಕೆ.ಜಿ. ಶಿವಕುಮಾರ್,  ಅಳಿಯ ವಕೀಲ ಕೆ.ವೈ.ರಾಮಚಂದ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಕುಟುಂಬಕ್ಕೆ ನೋವು ಭರಿಸುವ‌ ಶಕ್ತಿ ಭಗವಂತ ನೀಡಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ  ಬಿ.ಜಿ.ನಾಗರಾಜ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಎರಗಿ ಉಮೇಶ್ ಸೇರಿದಂತೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ.

DEATH NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe