
ಹೊಸನಗರ: ತಾಲೂಕಿನ ರೈತರಿಗೆ ಈ ಬಾರಿಯ ಬೆಳೆ ವಿಮೆ ಪರಿಹಾರದಲ್ಲಿ ಅತ್ಯಂತ ಕನಿಷ್ಠ ಹಣ ಬಿಡುಗಡೆಯಾಗಿದ್ದು ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಎವಿ ಮಲ್ಲಿಕಾರ್ಜುನ್ ತಿಳಿಸಿದರು.
ಈ ಕುರಿತಾಗಿ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ಬಿಡುಗಡೆಯಾದಂತಹ ಬೆಳೆ ವಿಮೆ ಪರಿಹಾರದ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರೈತರಿಗೆ ಅತ್ಯಂತ ಕನಿಷ್ಠ ಹಣ ಬಿಡುಗಡೆಯಾಗಿರುವುದು ಅತ್ಯಂತ ಬೇಸರದ ಸಂಗತಿ ಅಲ್ಲದೆ ಇದು ಈ ಭಾಗದ ರೈತರಿಗೆ ಆದಂತಹ ದೊಡ್ಡ ಅನ್ಯಾಯವಾಗಿದೆ ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಹೊಸನಗರ ತಾಲೂಕಿಗೆ 2024- 25ನೇ ಸಾಲಿನ ಬೆಳೆವಿಮೆ ಬಿಡುಗಡೆಯಾಗಿದ್ದು ಸುಮಾರು 9,869 ರೈತರಿಗೆ 9.81 ಕೋಟಿ ಕನಿಷ್ಠ ಹಣ ಬಿಡುಗಡೆಯಾಗಿದೆ. ಅತಿ ಹೆಚ್ಚು ಮಳೆ ಬೀಳುವ ತಾಲೂಕಿನಲ್ಲಿ ಈಗಾಗಲೇ ತೋಟಗಳಲ್ಲಿ ಗದ್ದೆಗಳಲ್ಲಿ ಬಹಳಷ್ಟು ಬಗೆಯ ರೋಗಗಳು ಹಬ್ಬಿದ್ದು ರೈತರಿಗೆ ಇದರಿಂದ ಬಹಳಷ್ಟು ಆದಾಯ ಕುಂಠಿತವಾಗಿದೆ ಇದರ ನಡುವೆ ಬೆಳೆ ವಿಮೆ ಪರಿಹಾರದಿಂದ ಒಂದಿಷ್ಟು ತೋಟವನ್ನು ಅಭಿವೃದ್ಧಿಪಡಿಸುವ ಅಥವಾ ಬಂದಿರುವಂತ ರೋಗಗಳಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಲು ಈ ವಿಮೆ ಹಣ ಸಹಕಾರಿಯಾಗಲಿದೆ ಎಂದು ಭಾವಿಸಿದ್ದ ರೈತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ.
ಇದಕ್ಕೆ ಸರಿ ಇಲ್ಲದಂತ ತಾಲೂಕಿನ ಮಳೆ ಮಾಪನಗಳು ಸಹ ಕಾರಣವಾಗಿದೆ ಅವುಗಳನ್ನು ಸರಿಪಡಿಸುವಂತೆ ಈ ಹಿಂದೆಯೂ ಸಹ ನಾನು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು ಆದರೆ ಇವರಿಗೂ ಅವುಗಳನ್ನು ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗದಿರುವುದು ವಿಪರ್ಯಾಸ ಜೊತೆಗೆ ಕನಿಷ್ಠ ಬೆಳೆವಿಮೆ ಬರಲು ಸಹ ಇದು ಕಾರಣವಾಗಿದೆ ಎಂದರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಹಾಗೂ ತಾಲೂಕಿನ ರೈತರು ಅವರಿಗಿಂತ ಶೇಕಡ 5% ನಷ್ಟು ಹೆಚ್ಚಿನ ವಿಮೆಹನವನ್ನು ಪಾವತಿಸುತ್ತಿದ್ದರು ಪರಿಹಾರ ವಿತರಣೆಯಲ್ಲಿ ಇಂತಹ ತಾರತಮ್ಯವಾಗಿರುವುದು ಖಂಡನೀಯ ಕೂಡಲೇ ಈ ಬಾರಿಯ ಪರಿಹಾರ ವಿತರಣೆಯಲ್ಲಿ ಆಗಿರುವಂತಹ ಲೋಪವನ್ನು ಪುನರ್ತ್ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಜೊತೆಗೆ ಈ ಭಾಗದ ರೈತರಿಗೆ ಆಗಿರುವಂತಹ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಕೃಷಿ ಸಮಾಜದ ನಿರ್ದೇಶಕರಾದ ವಿನಾಯಕ್ ಚಕ್ಕಾರ್ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ನಗರ ಭಾಗದಲ್ಲಿ ಈ ಬಾರಿ ಕಡಿಮೆ ಮಳೆಯಾಗಿದೆ ಎಂಬ ಕಾರಣದಿಂದ ವಿಮೆ ಪರಿಹಾರದಲ್ಲಿ ತಾರತಮ್ಯವನ್ನು ಮಾಡಿ ಕಡಿಮೆ ಪರಿಹಾರ ಮೊತ್ತವನ್ನ ನೀಡಿದ್ದು ಒಂದು ಗುಂಟೆಗೆ ಕೇವಲ 245 ರು ಗಳ ಪರಿಹಾರ ನೀಡಿದ್ದಾರೆ ಅಲ್ಲದೆ ಈ ಬಾರಿಯ ಅತಿಯಾದ ಮಳೆಯಿಂದಾಗಿ ಈ ಭಾಗದ ಪ್ರಮುಖ ಬೆಳೆಯಾದ ಅಡಿಕೆ ಹಾಗೂ ಕಾಳುಮೆಣಸಿದೆ. ಈ ಬಾರಿಯ ಕೊಳೆರೋಗದಿಂದ ಈಗಾಗಲೇ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಈ ಬಾರಿಯ ಬೆಳೆ ವಿಮೆ ಪರಿಹಾರ ಹಣವನ್ನು ನಂಬಿಕೊಂಡಿದ್ದ ರೈತರಿಗೆ ಅನ್ಯಾಯವಾಗಿದೆ ಆದ್ದರಿಂದ ಕೂಡಲೇ ಇಲಾಖೆ ಬೆಳೆ ವಿಮೆ ಕಂಪನಿಗೆ ಮಾಹಿತಿಯನ್ನು ನೀಡಿ ಪರಿಹಾರ ಮೊತ್ತವನ್ನು ಪುನರ್ಪರಿಶೀಲಿಸಿ ಸೂಕ್ತವಾದ ಪರಿಹಾರವನ್ನು ಬಿಡುಗಡೆಗೊಳಿಸಿ ಕೊಡಬೇಕು ಎಂದು ಮನವಿಯನ್ನ ಮಾಡಿದರು..
CROP INSURANCE CLAIM..
Discover more from Prasarana news
Subscribe to get the latest posts sent to your email.
