
ಹೊಸನಗರ: ತಾಲೂಕಿನ ಸುಡೂರು ಸೇತುವೆ ಬಳಿ ರಿಪ್ಪನ ಪೇಟೆ ಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಮಾರುತಿ ಆಲ್ಟೊ ಕಾರ್ ಹಾಗೂ ಶಿವಮೊಗ್ಗದಿಂದ ರಿಪ್ಪನ ಪೇಟೆ ಕಡೆ ಹೊರಟಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ಸಾವನಪ್ಪಿದ್ದಾನೆ.ರಿಪ್ಪನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳಸ ಗ್ರಾಮದ ಮನೋಜ್ (19) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ.
ಕೆಂಚನಾಲ ಗ್ರಾಮದ ಅಕ್ಷಯ್ ಎಂಬ ಯುವಕನಿಗೆ ಕಾಲು ಮುರಿತವಾಗಿದ್ದು ಸ್ಥಿತಿ ಗಂಭೀರವಾಗಿದೆ, ರಿಪ್ಪನ್‌ಪೇಟೆ ತೀರ್ಥಹಳ್ಳಿ ರಸ್ತೆ ನಿವಾಸಿ ಮನ್ವಿತ್ ಭಂಡಾರಿ ಗೆ ಕಾಲು ಮುರಿತವಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಗಾರದಲ್ಲಿಸಲಾಗಿದೆ..
ACCIDENT...
