KARNATAKA RAIN: ತಾಲೂಕಿನಲ್ಲಿ ಮುಂದುವರೆದ ಧಾರಾಕಾರ ಮಳೆ: ಮನೆ ಮತ್ತು ಕೊಟ್ಟಿಗೆಗೆ ಹಾನಿ..

ಹೊಸನಗರ: ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದೆ. ಈಗಾಗಲೇ ಹೋಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇವುಗಳ ನಡುವೆ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದು ಘಟನೆ ತಾಲೂಕಿನ ಸೋನಲೆ ಗ್ರಾಮದ ಕೊಳಗಿ ಯಾಲ್ಲಿ ನಡೆದಿದೆ.
ರಾತ್ರಿ ಸುರಿದ ಬಾರಿ ಮಳೆಗೆ  ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ನಿವಾಸಿ ವಿಶ್ವನಾಥ್ ಅವರ ಮನೆ ಮತ್ತು ಕೊಟ್ಟಿಗೆ  ಗೋಡೆ ಕುಸಿದು ಹಾನಿ ಆಗಿದೆ. ಭಾನುವಾರ ರಾತ್ರಿ ಈ ಭಾಗದಲ್ಲಿ ಸುರಿದು ಮಳೆ ಹಾನಿ ಸಂಭವಿಸಿದೆ.
ಮನೆಯಲ್ಲಿ ಇದ್ದ ವಿಶ್ವನಾಥ್,  ಪತ್ನಿ  ಹಾಗೂ ಮಕ್ಕಳು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.ಅವರಿಗೆ
ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಸತೀಶ್ ಸೊನಲೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ..

KARNATAKA RAIN..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading