HOSANAGARA:RUDRABHUMI:ತುಕ್ಕುಹಿಡಿದ ಶವದಹನ ಟ್ರೇ: ನೇತಾಡುತ್ತಿದೆ ತಗಡಿನ ಶೀಟ್: ಇದು ಹೊಸನಗರ ಕಲ್ಲು ಹಳ್ಳ ಸ್ಮಶಾನದ ಸ್ಥಿತಿ…

ಹೊಸನಗರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲ್ಲು ಹಳ್ಳ ಸಮೀಪದಲ್ಲಿ ಹಿಂದೂ ಸ್ಮಶಾನ ಭೂಮಿ ಇಂದು ಇಲ್ಲಿ ಅವ್ಯವಸ್ಥೆ ಮತ್ತಿತರ ಕಾರಣಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆಕಸ್ಮಿಕವಾಗಿ ಬೀಸಿದ ಭಾರೀ ಗಾಳಿಗೆ ಸ್ಮಶಾನದ ಮುಖ್ಯ ಶೆಡ್ ನ ಮೇಲ್ಚಾವಣಿಯ ತಗಡುಗಳು ಈ ಹಿಂದೆ ಹಾರಿ ಹೋಗಿದ್ದವು.

ಸ್ಮಶಾನದ ಶೆಡ್ಡಿನಲ್ಲಿರುವ ಶವ ದಹನ ಮಾಡುವ ಟ್ರೇ ಸಹ ತುಕ್ಕು ಹಿಡಿದು ಪಟ್ಟಿಗಳು ಕಿತ್ತು, ಕೈಗೆ ತಾಗಿದರೆ ಸಪ್ಟಿಕ್ ಆಗುತ್ತದೆ ಎಂಬಷ್ಟರ ಮಟ್ಟಿಗೆ ಹಾಳಾಗಿ ಹೋಗಿದೆ.ಮೇಲ್ಚಾವಣಿ ಶೀಟ್ ಗಳು ಕೆಲವು ಹಾರಿಹೋಗಿದ್ದು,ಇನ್ನು ಕೆಲವು ಗುಜರಿ ಮತ್ತಿತರರ ಪಾಲಾಗಿದೆ ಈ ನಡುವೆ ಅರ್ಧ ಕಿತ್ತು ಬಂದ ಸ್ಥಿತಿಯಲ್ಲಿ ತಗಡಿನ ಸೀಟ್ ಗಳು ಇದ್ದು ಯಾವುದೇ ಸಮಯದಲ್ಲಾದರೆ ಸಂಸ್ಕಾರ ಕೆಂದು ಬಂದವರ ಮೇಲೆ ಬೀಳುವ ಸಾಧ್ಯತೆ ಇದೆ.


ಸ್ಮಶಾನದ ಸುತ್ತಮುತ್ತಲು ಬಹಳಷ್ಟು ಗಿಡಗಂಟಿಗಳು ಬೆಳೆದಿದ್ದು ಅವುಗಳನ್ನ ಕಡಿಯೋ ಕೆಲಸಕ್ಕಾಗಲಿ ಸ್ವಚ್ಛಗೊಳಿಸುವ ಕೆಲಸಕ್ಕಾಗಿ ಪಟ್ಟಣ ಪಂಚಾಯಿತಿ ಮುಂದಾಗಿಲ್ಲ.
ಈ ಹಿಂದೆ ಮಳೆಗಾಲದ ಸಮಯದಲ್ಲಿ ಶವ ಸಂಸ್ಕಾರಕ್ಕೆ ಬಂದವರು ಛತ್ರಿಗಳನ್ನು ಹಿಡಿದು ಶವ ಸಂಸ್ಕಾರ ನಡೆಸಿ ಹೋಗಿದ ಘಟನೆಯು ಸಹ ನಡೆದಿತ್ತು.
ಸ್ಥಳೀಯರು ಬಹಳಷ್ಟು ಬಾರಿ ಈ ಕುರಿತು ವ್ಯವಸ್ಥಿತ ಶವಸಂಸ್ಕಾರಕ್ಕೆ ವ್ಯವಸ್ಥೆಯನ್ನು ಮಾಡಿಕೊಡುವಂತೆ ಮನವಿಯನ್ನ ನೀಡಿದರು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ಸ್ಮಶಾನದ ಸುತ್ತ ಬಹಳಷ್ಟು ಆಕೆಶಿಯ ಮರಗಳು ಬೆಳೆದು ನಿಂತಿದ್ದು ಅವುಗಳಲ್ಲಿ ಕೆಲವೊಂದು ಬೀಳುವ ಹಂತದಲ್ಲಿಯೂ ಸಹ ಇದೆ ಸತ್ತ ವ್ಯಕ್ತಿಯ ಸಂಬಂಧಿಕರು ಸ್ನೇಹಿತರು ದುಃಖದ ಜೊತೆಯಲ್ಲಿ ಭಯದ ವಾತಾವರಣದಲ್ಲಿ ಶವ ಸಂಸ್ಕಾರವನ್ನು ನಡೆಸುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಇನ್ನಾದರೂ ಕಾರಣಗಳನ್ನು ಕೊಟ್ಟು ಸಾರ್ವಜನಿಕರನ್ನು ಸಂತೈಸುವ ಬದಲು ಶೀಘ್ರವಾಗಿ ಆ ಸ್ಮಶಾನದಲ್ಲಿ ವ್ಯವಸ್ಥಿತ ಶವಸಂಸ್ಕಾರವನ್ನು ನಡೆಸಲು ವ್ಯವಸ್ಥೆಯನ್ನು ಮಾಡಿಕೊಡಬೇಕು..

ಕಲ್ಲು ಹಳ್ಳ ಸಮೀಪದ ಸ್ಮಶಾನ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ ಚಾವಣಿಯ ಶೀಟ್ ಗಳು ಕಿತ್ತು ಹೋಗಿವೆ ಶವದಹನ ಬಾಕ್ಸ್ ಹೆಸರಿಗಷ್ಟೇ ಆಗಿದೆ.
ಬಹಳಷ್ಟು ಸಮಯದಿಂದ ಹೀಗೆ ಇದ್ದು ಅದನ್ನು ಸರಿಪಡಿಸುವ ಕೆಲಸಕ್ಕೆ ಪಟ್ಟಣ ಪಂಚಾಯತ್ ಮುಂದಾಗುತ್ತಿಲ್ಲ ಇದನ್ನ ತುರ್ತು ಅನುದಾನದ ಮೂಲಕ ಕೂಡಲೇ ಸರಿಪಡಿಸಿ.

ನಾಗರಾಜ್.
ಅಧ್ಯಕ್ಷರು ವಿದ್ಯುತ್ ಗುತ್ತಿಗೆದಾರರ ಸಂಘ ಹೊಸನಗರ.



*ಈ ಕುರಿತು ಗಮನಕ್ಕೆ ಬಂದಿದ್ದು ಮುಂದಿನ ಸಭೆಯಲ್ಲಿ ಚರ್ಚಿಸಿ ಅನುದಾನವನ್ನ ನಿಗದಿಪಡಿಸಿ ಸ್ಮಶಾನದಲ್ಲಿ ಆಗಬೇಕಿರುವ ತುರ್ತು ಕೆಲಸವನ್ನು ಮಾಡಿಸಲಾಗುತ್ತದೆ

ನಾಗಪ್ಪ.
ಅಧ್ಯಕ್ಷರು ಪಟ್ಟಣ ಪಂಚಾಯತ್ ಹೊಸನಗರ

HOSANAGARA:RUDRABHUMI


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading