MEETING:ಕ್ಷೇತ್ರ ಮರುಸ್ಥಾಪನ ಹೋರಾಟ ಪಾದಯಾತ್ರೆ….
ಮಾ23 ಕೇ ನಗರ ಹೋಬಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಪೂರ್ವಭಾವಿ ಸಭೆ..

ಹೊಸನಗರ: ಹೊಸನಗರ ತಾಲೂಕು ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗಾಗಿ ಏಪ್ರಿಲ್ 5 ಮತ್ತು 6 ರಂದು ಮೂಲೆಗದ್ದೆ ಶ್ರೀ ಗಳ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆ ಕುರಿತು ನಗರ ಹೋಬಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಪೂರ್ವಭಾವಿ ಸಭೆಯನ್ನು ಮಾರ್ಚ್ 23 ಸೋಮವಾರದಂದು ಕರೆಯಲಾಗಿದೆ .
ಈ ಕುರಿತಾಗಿ ನಗರ ಹೋಬಳಿಯ ತಾಲೂಕು ಮುಖಂಡರುಗಳ ನೇತೃತ್ವದಲ್ಲಿ ಸಭೆಯನ್ನ ಕರೆದು ತೀರ್ಮಾನಿಸಲಾಗಿದ್ದು ಕ್ಷೇತ್ರ ಮರುಸ್ಥಾಪನ ಹೋರಾಟಕ್ಕೆ ನಗರ ಹೋಬಳಿಯ ಪ್ರತಿಯೊಬ್ಬರು ಪಕ್ಷಾತೀತವಾಗಿ ಜಾತ್ಯತೀತವಾಗಿ ಬೆಂಬಲವನ್ನ ಸೂಚಿಸುವ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂಬ ಉದ್ದೇಶದಿಂದ ನಗರ ಹೋಬಳಿಯ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಸಭೆಯನ್ನು ಕರೆದು ಅಲ್ಲಿ ಪಾದಯಾತ್ರೆ ಕುರಿತು ಚರ್ಚಿಸಿ ಹಾಗೂ ಸ್ಥಳೀಯರ ಸಲಹೆ ಮತ್ತು ಸಹಕಾರವನ್ನು ಪಡೆದುಕೊಳ್ಳುವ ಜೊತೆಗೆ ಒಂದಿಷ್ಟು ಜವಾಬ್ದಾರಿಯನ್ನು ನೀಡುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.
ಹಾಗೆಯೇ ಯಾವ ಪಂಚಾಯತ್ ವ್ಯಾಪ್ತಿಯಲ್ಲಿ ಯಾವ ಸಮಯಕ್ಕೆ ಸಭೆಯನ್ನ ನಿಗದಿ ಮಾಡಲಾಗಿದೆ ಎಂದು ಕೆಳಕಂಡ ಮಾಹಿತಿಯಲ್ಲಿ ತಿಳಿಸಲಾಗಿದೆ                                *1. ಯಡಿಯೂರು ಸುಳ್ಗೋಡು ಬೆಳಿಗ್ಗೆ 10 ಗಂಟೆಗೆ  2. ಮಾಸ್ತಿ ಕಟ್ಟೆ ಬೆಳಗ್ಗೆ 11:30 ಕ್ಕೆ.3. ಅಂಡಗಾ ದುದೂರು ಮಧ್ಯಾಹ್ನ 12:30 ಕ್ಕೆ.4 ಕರಿಮನೆ ಮಧ್ಯಾಹ್ನ 1:30 ಕ್ಕೆ.5. ಸಂಜೆ 4:00ಗೆ ನಿಟ್ಟೂರು.6.  ಸಂಜೆ 5: 30. ಸಂಪೇಕಟ್ಟೆ. 7. ಸಂಜೆ 6:30ಕ್ಕೆ ಮತ್ತಿಮನೆ.8. ಸಂಜೆ 7:00ಗೆ ಚಿಕ್ಪೇಟೆ ನಗರ.*                       ಈ ಮೇಲ್ಕಂಡ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಯನ್ನು ನಿಗದಿಪಡಿಸಲಾಗಿದ್ದು ಪ್ರತಿಯೊಬ್ಬರು ಪಕ್ಷಾತೀತವಾಗಿ ಜಾತ್ಯತೀತವಾಗಿ ಸಭೆಗೆ ಬಂದು ತಮ್ಮ ಅಮೂಲ್ಯವಾದ ಸಲಹೆ ಸಹಕಾರವನ್ನು ನೀಡಬೇಕಾಗಿ ಉಸ್ತುವಾರಿಗಳು ತಾಲೂಕು ವಿಧಾನಸಭಾ ಕ್ಷೇತ್ರ ಮರು ಸ್ಥಾಪನ  ಹೋರಾಟ ಸಮಿತಿ ಹೊಸನಗರ ಕೋರಿದೆ.

MEETING...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading