
ಹೊಸನಗರ: ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಮಾನ್ಯ ಹಾಗು ಅನಿವಾರ್ಯ ಎಂದು ಪದೋನ್ನತಿ ಹೊಂದಿ ವಿಜಯಪುರ ಜಿಲ್ಲೆಯ ಮಹಾನಗರ ಪಾಲಿಕೆಗೆ ವರ್ಗಾವಣೆ ಹೊಂದಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ್ ಎಸ್ ಗುಡ್ಡದ್ ತಿಳಿಸಿದರು.
ವರ್ಗಾವಣೆ ಹಿನ್ನಲೆ ಪಟ್ಟಣ ಪಂಚಾಯತಿ ಆಡಳಿತ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ದಾಖಲೆಗಳಲ್ಲಿ ಸಿಬ್ಬಂದಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಕಾರಣ ಇದು ಸಾರ್ವಜನಿಕ ದಾಖಲೆಗಳಾಗಿದೆ. ಜನ ಸಾಮಾನ್ಯರಿಗೂ ದಾಖಲೆಯ ಸ್ಥಿತಿ ಅರಿವಾಗುವಂತೆ ಜನತದಿಂದ ಸಿಬ್ಬಂದಿಗಳು ದಾಖಲೆಗಳನ್ನು ಕಾಯ್ದು ಕೊಳ್ಳುವ ಗುರುತರ ಜವಾಬ್ದಾರಿ ಸಿಬ್ಬಂದಿಗಳ ಮೇಲಿದೆ. ತಾವು ಕರ್ತವ್ಯ ನಿರ್ವಹಿಸದ ವೇಳೆಯಲ್ಲಿ ಸಹಕಾರ ನೀಡಿದ ಸಿಬ್ಬಂದಿಗಳು, ಜನಪ್ರತಿಗಳನ್ನು ಅವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಅಧ್ಯಕ್ಷ ನಾಗಪ್ಪ ಮಾತನಾಡಿ, ಜನಪ್ರತಿನಿಧಿಗಳ ಅಧಿಕಾರ ಶಾಶ್ವತವಲ್ಲ. ಆದರೆ, ಸರಕಾರಿ ಸಿಬ್ಬಂದಿಗಳ ಅಧಿಕಾರ ನಿರಂತರ. ಈ ವೇಳೆಯಲ್ಲಿ ಸಿಬ್ಬಂದಿಗಳು ಜನಪರ ಸೇವೆಗೆ ಮುಂದಾದಲ್ಲಿ ಮಾತ್ರವೇ ನಿವೃತ್ತಿ ಬಳಿಕವೂ ಜನರ ಮನಸ್ಸಿನಲ್ಲಿ ಸ್ಥಿರಸ್ಥಾನ ಪಡೆಯಲು ಸಾಧ್ಯವೆಂದರು.
ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯ ಅಶ್ವಿನಿ ಕುಮಾರ್, ಸಿಬ್ಬಂದಿಗಳಾದ ಮಂಜುನಾಥ್, ಗಿರೀಶ್ ಅಭಿಪ್ರಾಯ ಹಂಚಿಕೊಂಡರು.
ನೂತನ ಮುಖ್ಯಾಧಿಕಾರಿ ಸುರೇಶ್, ಸದಸ್ಯರಾದ ಗುರುರಾಜ್, ಗುಲಾಬಿ, ಕೃಷ್ಣವೇಣಿ, ನಿತ್ಯಾನಂದ, ಸಿಬ್ಬಂದಿಗಳಾದ ನೇತ್ರಾವತಿ, ಆಸ್ಮಾ, ಅಕ್ಷತಾ, ಶೃತಿ, ಬಸವರಾಜ್, ಪರಶುರಾಮ, ಉಮಾಶಂಕರ್, ಸರೋಜಾ, ನಾಗರಾಜ್ ಸೇರಿದಂತೆ ಹಲವರು ನಿರ್ಗಮಿತ ಮುಖ್ಯಾಧಿಕಾರಿ ಉಮೇಶ್ ಎಸ್ ಗುಡ್ಡದ್ ಅವರಿಗೆ ಶುಭಕೋರಿ ಬೀಳ್ಕೊಟ್ಟರು.
TRANSFER:HOSANAGARA
Discover more from Prasarana news
Subscribe to get the latest posts sent to your email.
