
ಹೊಸನಗರ:ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ವಾರ್ಷಿಕ ಪಥ ಸಂಚಲನ ಶನಿವಾರ ಮದ್ಯಾಹ್ನ ಇಲ್ಲಿ ನಡೆಯಿತು.
ಮದ್ಯಾಹ್ನ 3 ಕ್ಕೆ ಆರಂಭವಾದ ಮೆರವಣಿಗೆಯಲ್ಲಿ ಗಣವೇಷಧಾರಿಗಳಾಗಿದ್ದ ಸ್ವಯಂ ಸೇವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದರು.

ವಿಜಯದಶಮಿ ಪಥ ಸಂಚಲನ ಈ ವರ್ಷ ಶತಮಾನೋತ್ಸವದ ಸಂಭ್ರಮದ ಮೆರವಣಿಗೆ ಯಾಗಿತು.
ನಗರ ಮತ್ತು ಕಸಬಾ ಹೋಬಳಿಯ ಸ್ವಯಂಸೇವಕರು ದ್ಯಾವರ್ಸಾದಿಂದ ಹಾಗೂ
ಕೆರೆಹಳ್ಳಿ ಮತ್ತು ಹುಂಚಾ ಹೋಬಳಿಯವರು ಮಾವಿನಕೊಪ್ಪ ಸರ್ಕಲ್ ನಿಂದ ಹೊರಟು, ಮುಖ್ಯ ಮಾರ್ಗವಾಗಿ ಬಂದು ಹಳೇ ಕೋರ್ಟ್ ಸರ್ಕಲ್ ಬಳಿ ಸಂಗಮಗೊಂಡರು. ಬಳಿಕ ಮೆರವಣಿಗೆ
ಕಾರ್ಯಕ್ರಮ ನಡೆಯುವ ಸ್ಥಳ ವಾದ ಬಸ್ಟ್ಯಾಂಡ್ ಆವರಣದಲ್ಲಿ ಮುಕ್ತಾಯಗೊಂಡಿತು. ಬಳಿಕ ಮಾತನಾಡಿ
ರಾಜೇಶ್ ಅವರು ಸಂಘ ಸ್ಥಾಪನೆ ಹಿನ್ನೆಲೆ, ಸಂಘ ಬೆಳೆದು ಬಂದ ಹಾದಿಯ ಜೊತೆಯಲ್ಲಿ ಪಂಚ ಪರಿವರ್ತನಾ ಕಾರ್ಯಗಳ ಬಗ್ಗೆ ವಿಶೇಷವಾಗಿ ಮಾತನಾಡಿದರು
ತಾಲೂಕು ಕಾರ್ಯವಾಹ ಶ್ರೀ ಅಶ್ವಥ್ ಸ್ವಾಗತ ಮಾಡಿದರು,
ವ್ಯವಸ್ಥಾ ಪ್ರಮುಖ್ ಶ್ರೀ ರಮೇಶ್ ವಂದಿಸಿದರು..
RSS HOSANAGARA ...
