
ಹೊಸನಗರ:ಸಾಗರದಿಂದ ಹೊಸನಗರಕ್ಕೆ ಬರುವ 33ಕೆವಿ ಲೈನ್ ಮಾರ್ಗದ ಸಾಗರ 110/33kv MUSS ನಾ 20MVA ಪರಿವರ್ತಕ ಕಳೆದ. ಮೂರು ದಿನಗಳ ಹಿಂದೆ ವಿಫಲವಾಗಿತ್ತು ಅದನ್ನು ಶೀಘ್ರವಾಗಿ ಸರಿಪಡಿಸಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವುದಾಗಿ ಇಲಾಖೆ ತಿಳಿಸಿತ್ತು ಆದರೆ ವಿಫಲವಾದ ಪರಿವರ್ತಕವನ್ನು ಸರಿಪಡಿಸಲು ಇನ್ನೂ 10-15ದಿನಗಳಕಾಲ ಬೇಕಾಗುತ್ತದೆ ಎಂದು ತಿಳಿದುಬರುತಿದೆ. ಮೆಸ್ಕಾಂ ಹೊಸನಗರ ಶಾಖಾ ವ್ಯಾಪ್ತಿಯಲ್ಲಿ ಈಗ ಬೇರೆ ಬೇರೆ ಫೀಡರ್ ಗಳಿಂದ ವಿದ್ಯುತ್ ನೀಡಿರುತೇವೆ ಅ ಮಾರ್ಗಗಳು ಓವರ್ ಲೋಡ್ ಆಗಿ ಲೊ ವೋಲ್ಟೇಜ್ ಸಮಸ್ಸೆ ಆಗುತ್ತದೆ ಆದ್ದರಿಂದ ಗ್ರಾಹಕರು ಸಹಕರಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಮಾತ್ರ ಕೃಷಿ ಪಂಪ್ಸೆಟ್ ಬಳಸಿ ಮತ್ತು ಕುಡಿಯುವ ನೀರಿನ ಪಂಪ್ಸೆಟ್ ಗು ವೋಲ್ಟೇಜ್ ವ್ಯತ್ಯೆಯ ಆಗಲಿದ್ದು ಆದ್ದರಿಂದ ಅನಗತ್ಯ ವಿದ್ಯುತ್ ಬಳಕೆ ಬೇಡ ಮಿತವಾಗಿ ವಿದ್ಯುತ್ ಬಳಸಿ ಸಹಕರಿಸುವಂತೆ ಹೊಸನಗರ ಮೆಸ್ಕಾಂ ಗ್ರಾಹಕರಲ್ಲಿ ಮನವಿಯನ್ನ ಮಾಡಿದೆ.
ELECTRICITY SUPPLY
Discover more from Prasarana news
Subscribe to get the latest posts sent to your email.
