
ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ ವತಿಯಿಂದ ಆಯೋಜಿಸಲಾದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ – 2026ರ ಉದ್ಘಾಟನಾ ಕಾರ್ಯಕ್ರಮವು ತಾಲೂಕಿನ ಚಿಕ್ಕ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಸಗಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಜೇನಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜ್ಯೋತಿ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಬಳಿಕ ಕೊಡಚಾದ್ರಿ ಸರ್ಕಾರಿ ಪ್ರಾಥಮಿಕ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಉಮೇಶ್ ಕೆ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಎನ್.ಎಸ್.ಎಸ್. ಚಳವಳಿಯ ಇತಿಹಾಸವನ್ನು ವಿವರಿಸಿ, ಸಾಮಾಜಿಕ ಜವಾಬ್ದಾರಿ ಮತ್ತು ಸೇವಾಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಇದರ ಪಾತ್ರ ಏನು ಎಂಬುದನ್ನು ತಿಳಿಸಿದರು. ಹಾಗೂ ಈ ಶಾಲೆಯಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಿಬಿರಾಧಿಕಾರಿಗಳಾದ ರಾಕೇಶ್, ಮೇದಿನಿ ಕೆ.ಎಸ್, ಸಹ ಶಿಬಿರಾಧಿಕಾರಿಗಳಾದ ಗುರುಮೂರ್ತಿ, ಪ್ರಕಾಶ್, ಸುಬ್ರಹ್ಮಣ್ಯ ಹಾಗೂ ಕಿರಣ್, ಕಾಲೇಜಿನ ಐ ಕ್ಯೂ ಏ ಸಿ ಸಂಚಾಲಕರಾದ ಮಂಜುನಾಥ್ ಡಿ, ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್, ಗ್ರಾ.ಪಂ ಮಾಜಿ ಸದಸ್ಯರಾದ. ಚಂದ್ರಶೇಖರ್ ಉಪಸ್ಥಿತರಿದ್ದರು..
NSS CAMP..
Discover more from Prasarana news
Subscribe to get the latest posts sent to your email.
