KUWJ 2024-25: ಲೇಖನಿಗೆ ಸಂದ ಗೌರವ : ಪತ್ರಕರ್ತ ನಾ.ರವಿ….
ಮಂಡಿಬೆಲೆ ಶ್ಯಾಮಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವಿ ಬಿದನೂರಿಗೆ ಸ್ಥಳೀಯ ಪತ್ರಕರ್ತರ ಅಭಿನಂದನೆ..

ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) KUWJ - 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ಅವರನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾ.ರವಿ ನೇತೃತ್ವದಲ್ಲಿ ಹಲವು ಪತ್ರಕರ್ತರು ಪ್ರಶಸ್ತಿ ಪುರಸ್ಕೃತರ ಸ್ವ ಗೃಹಕ್ಕೆ ತೆರಳಿ ನೆನಪಿನ ಕಾಣಿಕೆ ನೀಡುವ ಮೂಲಕ ಅಭಿನಂದಿಸಿದರು.
ತಮ್ಮ ಲೇಖನಿಯ ಮೂಲಕ ಗ್ರಾಮೀಣ ಭಾಗದ ಹಲವು ಜನಪರ ಜ್ವಲಂತ ಸಮಸ್ಯೆಗಳ ಸೂಕ್ತ ಪರಿಹಾರಕ್ಕಾಗಿ ತಮ್ಮ ವಿಶಿಷ್ಟ ಲೇಖನದ ಮೂಲಕ ಸರಕಾರದ ಗಮನ ಸೆಳೆದ ಕಾರಣಕ್ಕೆ ಈ ಬಾರಿಯ ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿಗೆ ರವಿ ಬಿದನೂರು ಭಾಜನರಾಗಿದ್ದರು.
ಇದೇ ಜನವರಿ 18-19ರಂದು ತುಮಕೂರಿನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸಂಘ ಗೌರವಿಸಿತ್ತು.
ಈ ವೇಳೆ ಪತ್ರಕರ್ತ ನಾ.ರವಿ ಮಾತನಾಡಿ, ಸುಮಾರು 25 ವಸಂತಗಳ ನಿರಂತರ ಪತ್ರಿಕೋದ್ಯಮದಲ್ಲಿ ರವಿ ಬಿದನೂರು ನೀಡಿದ ಸೇವೆ ಅಪಾರ. ಹಲವು ಯುವ ಪತ್ರಕರ್ತರ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುವ ಜೊತೆಯಲ್ಲಿ ಪತ್ರಿಕೋದ್ಯಮ ತಿರುಳನ್ನು ಧಾರೆ ಎರೆದ  ಅವರ ಗುಣ ಈ ಸಾಧನೆಗೆ ಪ್ರೇರಣೆ  ಎಂದರು.
ಈಗಾಗಲೇ ಹಲವು ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಮತ್ತಷ್ಟು ಪ್ರಶಸ್ತಿಗಳ ಸರಮಾಲೆಯೇ ಒಲಿದು ಬರಲೆಂದು ಪತ್ರಕರ್ತೆ ಅಶ್ವಿನಿ ಪ್ರಭು ಶುಭ ಹಾರೈಸಿದರು.
ಮನು ಸುರೇಶ್, ಶ್ರೀಕಂಠ ಇದ್ದರು...

KUWJ 2024-25...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading