
ಬೆಂಗಳೂರು: ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆಯನ್ನು ಸರ್ಕಾರ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತು ಗುರುವಾರ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು ಪಡಿತರ ಕಾರ್ಡ್ ಗಳ ಪರಿಷ್ಕರಣೆಯನ್ನು ಸದ್ಯಕ್ಕೆ ಕೈ ಬಿಡಲಾಗಿದ್ದು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದಿಲ್ಲ ಕಾಡುಗಳಿಗೂ ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.
ಕಾರ್ಡ ಪರಿಷ್ಕರಣೆಗೆ ಒಳಪಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ತರದೆ ಎಲ್ಲಾ ಕಾರ್ಡ್ಗಳಿಗೂ ಯಥಾಸ್ಥಿತಿಯಲ್ಲಿ ಮುಂದುವರಿಸುವುದಾಗಿ ತಿಳಿಸಿದರು.

ಈಗಾಗಲೇ ಪರಿಷ್ಕರಣೆಗೆ ಒಳಪಟ್ಟ ಅಮನತ್ ಗೊಂಡಿರುವ ಕಾಡುಗಳನ್ನು ಒಂದು ವಾರದ ಅವಧಿಯೊಳಗೆ ಪುನಃ ಅಕ್ಕಿಯನ್ನು ಪಡೆದುಕೊಳ್ಳಲು ಅವಕಾಶವನ್ನ ಕಲ್ಪಿಸಲಾಗುವುದು ಇವರಿಗೆ ರಾಜ್ಯದಲ್ಲಿ 4,366 ಸರ್ಕಾರಿ ಉದ್ಯೋಗಿಗಳ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. 98,473 ಐಟಿ ರಿಟರ್ನ್ ಪಾವತಿದಾರರ ಬಳಿ BPL ಕಾರ್ಡ್ ಇವೆ. ಒಟ್ಟು 1,2,509 ಅನರ್ಹ BPL ಕಾರ್ಡ್‌ಗಳಿವೆ. ಅದರಲ್ಲಿ ರಾಜ್ಯಾದ್ಯಂತ 8,647 ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಇದರಲ್ಲಿ ಬಡವರ ಕಾರ್ಡ್ ರದ್ದು ಆಗಿದ್ದರೆ ಒಂದು ವಾರದಲ್ಲಿ ವಾಪಸ್ ಹಳೆಯ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗುವುದು ಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು.
BPL:CARD
Discover more from Prasarana news
Subscribe to get the latest posts sent to your email.
