
ಹೊಸನಗರ: ಕಳೆದ ಕೆಲವು ತಿಂಗಳುಗಳಿಂದ ಹೊಸನಗರ ತಾಲೂಕು ಕಛೇರಿಯಲ್ಲಿ ಆಧಾರ್ ಎನ್‌ರೋಲ್‌ಮೆಂಟ್ ಸೆಂಟರ್ ಸ್ಥಗಿತಗೊಂಡಿದ್ದು. ಇದರಿಂದಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವ ಮತ್ತು ಹೊಸ ಆಧಾರ್ ಮಾಡಿಸುವ ಸಾರ್ವಜನಿಕರು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಹೊಸನಗರದ ಸುತ್ತಮುತ್ತಲಿನಿಂದ ಯಡೂರು, ನಿಟ್ಟೂರು, ಸಂಪೇಕಟ್ಟೆ ಮಾಸ್ತಿಕಟ್ಟೆ, ಹುಲಿಕಲ್ ಈ ರೀತಿಯಾಗಿ 40-50 ಕಿಲೋಮೀಟರ್ ದೂರದಿಂದ ಹೊಸನಗರ ಕೇಂದ್ರಕ್ಕೆ ಬಂದು ಇಲ್ಲಿ ಆಧಾರ್ ಕೇಂದ್ರ ಬಂದ್ ಆಗಿರುವುದನ್ನು ನೋಡಿ ವಾಪಾಸ್ ಹೋಗುತ್ತಿದ್ದಾರೆ. ಹೊಸನಗರ ಮತ್ತು ಸುತ್ತಮುತ್ತಲೂ ಎಲ್ಲಿಯೂ ಆಧಾರ್ ಕೇಂದ್ರ ಇಲ್ಲದಿರುವುದರಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೊಸನಗರದ ಅಂಚೆ ಕಛೇರಿಯಲ್ಲಿ ಮಾತ್ರ ಆಧಾರ್ ತಿದ್ದುಪಡಿ ಮಾಡುತ್ತಿದ್ದು, ಇಲ್ಲಿಯೂ ಕೂಡ ದಿನಕ್ಕೆ ಕೇವಲ 25 ಜನರಿಗೆ ಮಾತ್ರ ಅವಕಾಶವಿರುತ್ತದೆ. ಆದರೆ ಪ್ರತಿದಿನ ಬೆಳಿಗ್ಗೆ 5.30 ರಿಂದಲೇ 150-200 ಜನರು, ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಸರತಿ ಸಾಲಿನಲ್ಲಿ ಕಾಯುವಂತಾಗಿದೆ.

ಹೊಸನಗರ ತಾಲ್ಲೂಕು ಕೇಂದ್ರವಾಗಿಯೂ ಇಲ್ಲಿ ಒಂದು ಆಧಾರ್ ಸೆಂಟರ್ ಇಲ್ಲದಿದ್ದರೆ ಜನರ ಪರಿಸ್ಥಿತಿಯೇನು? ಪ್ರತಿಯೊಂದಕ್ಕೂ ಆಧಾರ್ ಅಪ್ಲೇಟ್, ಕೆ.ವೈ.ಸಿ ಮಾಡಿಸಬೇಕೆಂದು ತಿಳಿಸುವ ಸರ್ಕಾರಿ ಇಲಾಖೆಗಳು ಜನರಿಗೆ ಅದಕ್ಕೆ ಸರಿಯಾದ ವ್ಯವಸ್ಥೆಯನ್ನು ಮಾಡಿಸಬೇಕಾಗಿರುವುದು ಅಗತ್ಯವಲ್ಲವೇ?
ಆದ್ದರಿಂದ ಹೊಸನಗರ ತಾಲ್ಲೂಕು ಭಾರತೀಯ ಜನತಾ ಪಕ್ಷದ ತಾಲ್ಲೂಕು ಘಟಕವು ಸಾರ್ವಜನಿಕರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಾವು ಕೂಡಲೇ ಈ ಬಗ್ಗೆ ತಕ್ಷಣವೇ ಕ್ರಮಕೈಗೊಂಡು ಆಧಾರ್ ಸೆಂಟರನ್ನು ತೆರೆದು ಎಲ್ಲಾ ಕಾರ್ಯನಿರತ ದಿನಗಳಲ್ಲಿ ಸಾರ್ವಜನಿಕರಿಗೆ ಆಧಾರ್ ಸೇವೆಯನ್ನು ಒದಗಿಸುವ ಕೆಲಸವನ್ನು ಮಾಡಬೇಕೆಂದು ತಾಲ್ಲೂಕು ಘಟಕವು ಗಂಭೀರವಾಗಿ ಆಗ್ರಹಿಸುತ್ತಿದೆ. ಈ ಕುರಿತು ತಾವು ಕ್ರಮ ಕೈಗೊಳ್ಳದೇ ಇದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಪಕ್ಷಾತೀತವಾಗಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು ಈ ಸಂದರ್ಭದಲ್ಲಿ ಮುಖಂಡರಾದ ದೇವಾನಂದ್ ಹೊಸನಗರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಶ್ರೀಪತಿ ರಾವ್ ಮುಂತಾದವರು ಉಪಸ್ಥಿತರಿದ್ದರು.
BJP...
Discover more from Prasarana news
Subscribe to get the latest posts sent to your email.
