MESCOM:ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ‘ವಿದ್ಯುತ್’ ಕಿಡಿ: ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ!

ಹೊಸನಗರ:ಅಸಮರ್ಪಕ ವಿದ್ಯುತ್ ಸರಬರಾಜು ಮತ್ತು ವಿದುತ್ ಕಡಿತದಿಂದ ಬೇಸತ್ತ ಗ್ರಾಹಕರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಹೊಸನಗರ ಮೆಸ್ಕಾಂ ಕಚೇರಿಯಲ್ಲಿ ಮೆಸ್ಕಾಂ ಎಸ್ ಇ ಜಯದೇವಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಆರೋಪಗಳ ಸುರಿಮಳೆಗೈದರು ಹೊಸನಗರ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ಈವರೆಗೂ ಅವುಗಳಿಗೆ ಸೂಕ್ತವಾದ ಪರಿಹಾರ ದೊರೆತಿಲ್ಲ ಜೊತೆಗೆ ಅಧಿಕಾರಿಗಳು ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡುತ್ತಿಲ್ಲ ಅಲ್ಲದೆ ಕೆಲ ಅಧಿಕಾರಿಗಳು ಗ್ರಾಹಕರ ಬಳಿ ದುರ್ವರ್ತನೆಯನ್ನು ತೋರುತ್ತಿದ್ದಾರೆ ಎಂಬ ಆರೋಪ ಗಟ್ಟಿ ಧ್ವನಿಯಲ್ಲಿ ಕೇಳಿ ಬಂದಿತ್ತು.
ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಲೈನ್‌ಮ್ಯಾನ್‌ಗಳು ಅಥವಾ ಪವರ್‌ಮ್ಯಾನ್‌ಗಳ ತೀವ್ರ ಕೊರತೆಯಿಂದಾಗಿ ತಾಂತ್ರಿಕ ದೋಷಗಳನ್ನು ಸಕಾಲದಲ್ಲಿ ಸರಿಪಡಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.
ಜೊತೆಗೆ ಪ್ರತಿ ಬಾರಿಯ ಮೇಲಧಿಕಾರಿಗಳ ಆದೇಶದಂತೆ ಸಭೆಯನ್ನು ನಡೆಸಿ ಸಾರ್ವಜನಿಕರಿಂದ ಆವಾಲುಗಳನ್ನು ಸ್ವೀಕರಿಸುವ ಅಧಿಕಾರಗಳು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ ಪ್ರತಿ ಬಾರಿಯೂ ಕೇವಲ ನಾಮಕಾವಸ್ತೆಯಷ್ಟೇ ಸಭೆಯನ್ನು ನಡೆಸುತ್ತಿದ್ದಾರೆ ಇದೇ ರೀತಿ ಮುಂದುವರೆದರೆ ಮೆಸ್ಕಾಂ ಇಲಾಖೆ ವಿರುದ್ಧ ಉಗ್ರ ಹೋರಾಟವನ್ನು ನಡೆಸುವ ಎಚ್ಚರಿಕೆಯನ್ನು ಸಹ ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡಿದರು.

110 ಕೆ ವಿ ವಿದ್ಯುತ್ ಸ್ಥಾವರ ಕುರಿತು ಚರ್ಚೆ.

ಇದೇ ಸಂದರ್ಭದಲ್ಲಿ ಅಧಿಕಾರಿಗಳು 110 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣವಾದರೆ ಈ ಭಾಗದ ವಿದ್ಯುತ್ ಸಮಸ್ಯೆ ಪರಿಹಾರ ಆಗುವುದಾಗಿ ತಿಳಿಸಿದರು ಇದರಿಂದ ಸಿಟ್ಟಾದ ಸಾರ್ವಜನಿಕರು ಕಳೆದ ಹತ್ತು ವರ್ಷಗಳಿಂದ ಇದನ್ನು ಹೇಳಿಕೊಂಡು ಬಂದಿದ್ದೀರಿ ಪ್ರತಿ ಬಾರಿಯೂ ಅರಣ್ಯ ಇಲಾಖೆ ಹಾಗೂ ಜಾಗದ  ಸಮಸ್ಯೆಯನ್ನು ತೋರಿಸಿ ಕಾಮಗಾರಿಯನ್ನು ಮುಂದೂಡುತ್ತಲೆ ಬಂದಿದ್ದು ರಾಷ್ಟ್ರೀಯ ಹೆದ್ದಾರಿ ಸೇತುವೆಗಳ ನಿರ್ಮಾಣ ಹೀಗೆ ವಿವಿಧ ಕಾಮಗಾರಿಗಳಿಗೆ ಅರಣ್ಯ ಹಾಗೂ ಜಾಗದ ಸಮಸ್ಯೆ ಉಂಟಾಗುವುದಿಲ್ಲ ಆದರೆ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಿರುವ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮಾತ್ರ ಇಂತಹ ಸಮಸ್ಯೆಗಳು ಉಂಟಾಗುತ್ತದೆ ಎಂದು ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಂಬರ್ ಈಗಾಗಲೇ 110 ವಿದ್ಯುತ್ ಸ್ಥಾವರ ನಿರ್ಮಾಣ ಕ್ಕೆ ಜಾಗವನ್ನು ನಿಗದಿಪಡಿಸಿದ್ದು ಅದು ಈಗಾಗಲೇ ಪ್ರಕ್ರಿಯೆಯಲ್ಲಿದೆ ಈ ಕುರಿತಾಗಿ ಶಾಸಕರು ಸಹ ಹೆಚ್ಚಿನ ಒತ್ತನ್ನು ನೀಡಿದ್ದು ಶೀಘ್ರವಾಗಿ ಆ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆಯನ್ನು ದಾಖಲೆಯೊಂದಿಗೆ ನೀಡಿದರು.

ಅಕ್ರಮ ಕುರಿತು ಆರೋಪ.

ಮೆಸ್ಕಾಂ ಇಲಾಖೆಯ ದುರಸ್ತಿ ಕಾಮಗಾರಿಯಲ್ಲಿ ಬಳಸುವಂತಹ ವಿದ್ಯುತ್ ಉಪಕರಣಗಳು ಕಳಪೆ ಗುಣಮಟ್ಟದಾಗಿದ್ದು ಇದರಲ್ಲಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಜೊತೆಗೆ ಅದನ್ನ ಲೋಕಾಯುಕ್ತ ತನಿಖೆಗೆ ಆಗ್ರಹಿಸುವುದಾಗಿ ಸ್ಥಳೀಯರೊಬ್ಬರು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಈ ಸಭೆಯಲ್ಲಿ ಮೆಸ್ಕಾಂ ಎಇಇ ಚಂದ್ರಶೇಖರ್ ಎಸ್ಓ ಮಾಯಣ್ಣ ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ ವಿ ಜಯರಾಮ್, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

MESCOM...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading