
ಶಿವಮೊಗ್ಗ: ಹೊಸನಗರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 11 ಲಕ್ಷ ರೂ.ಗೂ ಅಧಿಕ ಲಾಭಗಳಿಸಿದ್ದು, ಈ ಆರ್ಥಿಕ ವರ್ಷದಲ್ಲಿ ಆರು ಲಕ್ಷ ರೂ. ಲಾಭ ಗಳಿಸಿದೆ. ಸಾಲ ಹಾಗೂ ಬಡ್ಡಿ ಮರುಪಾವತಿಯಲ್ಲಿ ಇಳಿಕೆಯಾಗಿದ್ದೇ ಇದಕ್ಕೆ ಕಾರಣ ಎಂದು ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಮ ಹೇಳಿದರು. ಸರ್ಕಾರದ ವಿವಿಧ ಮೂಲಗಳಿಂದ ಬ್ಯಾಂಕ್‌ಗೆ ನೀಡಿದ್ದ ಸಾಲದ ಮೇಲೆ 7 ಲಕ್ಷ ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಯಿತು. 7ನೇ ವೇತನ ಆಯೋಗದ ಶಿಫಾರಸು ಜಾರಿ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ವೇತನಕ್ಕಾಗಿ 15 ಲಕ್ಷ ರೂ. ಹೆಚ್ಚುವರಿ ಹೊರೆಯಾಯಿತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
.9ರಂದು ಹೊಸನಗರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಬ್ಯಾಂಕ್‌ನ 2025-26ನೇ ಸಾಲಿನ 219 ಸರ್ವ ಸದಸ್ಯರ ಸಭೆ ನಡೆಯಲಿದೆ. ಸುಸ್ತಿಸಾಲ ವಸೂಲಾತಿಗಾಗಿ ಪ್ರಕರಣಗಳು ಕೋರ್ಟ್‌ನಲ್ಲಿವೆ. ಬ್ಯಾಂಕ್‌ಗೆ 2 ಕೋಟಿ ರೂ.ಗೂ ಹೆಚ್ಚು ಬಡ್ಡಿ ವಸೂಲಾಗಬೇಕಿದೆ ಎಂದರು. ಈ ಬಾರಿ 2.98 ಲಕ್ಷ ರೂ. ಸಂಗ್ರಹವಾಗಿದೆ. 3 ಕೋಟಿ ರೂ.ಗೂ ಅಧಿಕ ಕೃಷಿ ಸಾಲ ವಿತರಿಸಲಾಗಿದೆ. 3.50 ಕೋಟಿ ರೂ. ಹೆಚ್ಚುವರಿ ಠೇವಣಿ ಸಂಗ್ರಹ, 4 ಕೋಟಿ ರೂ. ಸ್ವಂತ ಬಂಡವಾಳದಲ್ಲಿ ವ್ಯವಹರಿಸುವುದು ಬ್ಯಾಂಕ್ ಮುಂದಿನ ಗುರಿ ಸಾಲ ಎಂದರು. 63 ಮಂದಿಗೆ ಹೊಸದಾಗಿ ವಿತರಿಸಲಾಗಿದೆ ಎಂದರು. ವಾಲೆಮನೆ ನಾಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.
GENERAL BODY..
Discover more from Prasarana news
Subscribe to get the latest posts sent to your email.
