
ಹೊಸನಗರ:ಬಿಜೆಪಿ ನಾಯಕರು ಸಣ್ಣಪುಟ್ಟ ವಿಷಯಗಳಿಗೂ ರಾಜಕೀಯ ಬಣ್ಣವನ್ನು ಬಳಿದು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರಮೌಳಿ ಆರೋಪಿಸಿದರು.
ಮಂಗಳವಾರ ಹೊಸನಗರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜಕಾರಣವನ್ನು ಮಾಡುತ್ತಿದ್ದು ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿದೆ ಎಂದರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆಪ್ಟೆಂಬರ್ 7ರಂದು ನಿಗದಿಯಾಗಿದ್ದು ಶಾಸಕರ ಒತ್ತಡ ಹಾಗೂ ರಾಜಕೀಯ ಒತ್ತಡದಿಂದಲ್ಲ ಅದು ಶಿಕ್ಷಕರ ಸಂಘವೇ ಮೊದಲು ನಿಗದಿ ಮಾಡಿ ತೀರ್ಥಹಳ್ಳಿ ಹಾಗೂ ಸಾಗರ ಹೊಸನಗರ ಕ್ಷೇತ್ರದ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಎಂದರು ಹೊಸನಗರ ಕ್ಷೇತ್ರವು ತೀರ್ಥಹಳ್ಳಿ ಹಾಗೂ ಸಾಗರ ಕ್ಷೇತ್ರಕ್ಕೆ ಹಂಚಿಹೋದ ಕಾರಣ ಇಬ್ಬರು ಶಾಸಕರು ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಪಾಲ್ಗೊಳ್ಳುವುದನ್ನು ಅರಿತ ಶಿಕ್ಷಕರ ಸಂಘ ಕಾರ್ಯಕ್ರಮವನ್ನು ಸೆಪ್ಟೆಂಬರ್ 7ನೇ ತಾರೀಖಿನಂದು ನಿಗದಿಪಡಿಸಿತ್ತು ಇದಕ್ಕೆ ಇನ್ನೊಂದು ಕಾರಣವೇನೆಂದರೆ ಹಲವಾರು ಶಿಕ್ಷಕರು ತಾಲೂಕು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿದ್ದು ಅವರನ್ನು ಶಾಸಕರಿಂದ ಗೌರವಿಸುವ ಉದ್ದೇಶವಿದ್ದ ಕಾರಣ ಕಾರ್ಯಕ್ರಮ ದಿನಾಂಕ 7ಕ್ಕೆ ನಿಗದಿಯಾಗಿತ್ತು ಇದು ಬಿಜೆಪಿಯ ಶಾಸಕರಾದ ಆರಗ ಜ್ಞಾನೇಂದ್ರ ಾರರವರೆಗೂ ತಿಳಿದಿತ್ತು ವಿನಾಕಾರಣ ಆರೋಪ ಮಾಡುವ ಬಿಜೆಪಿ ನಾಯಕರು ತಮ್ಮ ಶಾಸಕರ ಬಳಿಯೇ ಈ ಕುರಿತು ಮಾಹಿತಿಯನ್ನು ಪಡೆಯಬಹುದಾಗಿತ್ತು ಎಂದರು.
ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕರಿಗೆ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂಬ ಬಗ್ಗೆ ಮಾಹಿತಿಯನ್ನು ಪಡೆದು ಬಳಿಕ ಮಾತನಾಡಬೇಕು ಕಳೆದ ಮೂರು ವರ್ಷದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ತಾಲೂಕಿಗೆ ನಿರೀಕ್ಷೆಗೂ ಮೀರಿದಂತ ಅನುದಾನವನ್ನ ತಂದು ಅಭಿವೃದ್ಧಿಪಡಿಸಿದ್ದಾರೆ ಈಗಾಗಲೇ 30 ಕಿ.ಮೀ ರಸ್ತೆ ಕಾಮಗಾರಿಯನ್ನು ಜೊತೆಗೆ 70 ಕಾಲು ಸಂಖ್ಯೆಗಳನ್ನು ತಾಲೂಕಿಗೆ ತಂದಿದ್ದು ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಲ್ಯಾಬ್, ಬಸ್ಟಾಂಡ್ ಕಟ್ಟಡ ನವೀಕರಣ ವಟಾರದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಇವೆಲ್ಲವೂ ಅಭಿವೃದ್ಧಿ ಕಾರ್ಯಗಳನ್ನುವೆ ಅದು ಅಲ್ಲದೆ ಇನ್ನೆರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಬಳಿಕ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಬಿಜೆಪಿ ನಾಯಕರಿಗೆ ತಮ್ಮ ಸಂಸದರು ಹಾಗೂ ರಾಜ್ಯನಾಯಕರ ಬಳಿ ಹೋಗಿ ಕಸ್ತೂರಿರಂಗನ್ ವರದಿ ಜೊತೆಗೆ ಪಟ್ಟಣದಿಂದ ಹೊರಗೆ ನಿರ್ಮಾಣವಾಗುತ್ತಿರುವ ಬೈಪಾಸ್ ಕಾಮಗಾರಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿ ಬೈಪಾಸ್ ಕಾಮಗಾರಿ ಬದಲು ಹೈವೇಯನ್ನು ಪಟ್ಟಣದ ಒಳಭಾಗದಲ್ಲಿ ಹಾದುಹೋಗುವಂತೆ ಮನವಿಯನ್ನ ಮಾಡಲಿ ಎಂದರು ಜೊತೆಗೆ ನಿಮ್ಮದೇ ಶಾಸಕರ ಅವಧಿಯಲ್ಲಿ ಮಾಡಲು ಸಾಧ್ಯವಾಗದಂತಹ ಹಲವಾರು ಕಾಮಗಾರಿಗಳನ್ನು ಈ ಕ್ಷೇತ್ರದ ಶಾಸಕರು ಮಾಡಿ ತೋರಿಸಿದ್ದಾರೆ ಕೇವಲ ಸಣ್ಣ ಸಣ್ಣ ವಿಚಾರಗಳನ್ನು ಹಿಡಿದುಕೊಂಡು ಕೀಳು ಮಟ್ಟದ ರಾಜಕಾರಣವನ್ನ ಮಾಡುವ ಬದಲು ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನಾಯಕರ ಮೇಲೆ ಒತ್ತಡವನ್ನು ತನ್ನಿ ಎಂದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿ
ಒಂದು ಹಂತದಲ್ಲಿ ಸಮಾಜದಲ್ಲಿ ಕಳೆದು ಹೋದವರು ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಇಂದು ಮಾತನಾಡುತ್ತಿದ್ದಾರೆ ಅವರು ಮಾತನಾಡುವ ಮೊದಲು ನಾನು ಏನು ತಪ್ಪು ಮಾಡಿದ್ದೇನೆ ಎಷ್ಟು ದಂಡ ಕಟ್ಟಬೇಕಿದೆ ಎಂಬುದನ್ನು ಅರಿತು ಮಾತನಾಡಬೇಕು ಹೊಸನಗರಕ್ಕೆ ಹೊಸ ಮೆರುಗನ್ನ ತಂದವರು ನಮ್ಮ ಶಾಸಕರು ಮುಂದಿನ ಚುನಾವಣೆಯಲ್ಲಿಯೂ ಸಹ ಅವರು ಮತ್ತೊಮ್ಮೆ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲಿದ್ದು ಬಿಜೆಪಿಯ ನಾಯಕರು ಏನು ಸುಳ್ಳು ಆರೋಪಗಳನ್ನ ಮಾಡಿದರು ಅವರು ಮತ್ತೊಮ್ಮೆ ಅಧಿಕಾರವನ್ನು ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿನಾಕಾರಣ ಅವರ ವಿರುದ್ಧ ಸುಳ್ಳು ಆರೋಪವನ್ನು ಮಾಡಿದರೂ ಸುಮ್ಮನಿರುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಭಾಕರ್, ಸದಾಶಿವ ಶೆಟ್ಟಿ, ಎಂ ಪಿ ಸುರೇಶ್, ಚನ್ನಬಸಪ್ಪ, ಗುರು ಜಯನಗರ, ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು
PRESS MEET.
Discover more from Prasarana news
Subscribe to get the latest posts sent to your email.
