
ಹೊಸನಗರ:ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಳವಾಗುತ್ತಿದ್ದು,ಕಳೆದ 2 ತಿಂಗಳಲ್ಲಿ 251ಕು ಅಧಿಕ ಜನರಿಗೆ ಬೀದಿ ನಾಯಿ ಕಡಿತವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹೊಸನಗರ ಖಾಸಗಿ ಬಸ್ ನಿಲ್ದಾಣ ಸೇರಿ ಪಟ್ಟಣದ ಬಹುತೇಕ ವಾರ್ಡುಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ ಇದರಿಂದ ಸಾರ್ವಜನಿಕರು ಆತಂಕದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಮುಂಜಾನೆ ವಾಯು ವಿಹಾರಕ್ಕೆ ತೆರಳುವವರಿಂದ ಹಿಡಿದು ದ್ವಿಚಕ್ರ ವಾಹನ ಸವಾರರು ವೃದ್ಧರು ಶಾಲಾ ಮಕ್ಕಳ ಮೇಲು ಬೀದಿ ನಾಯಿಗಳು ದಾಳಿ ನಡೆಸಿದ ಉದಾಹರಣೆಗಳಿವೆ.ಈ ಕುರಿತಂತೆ ಹಲವು ಬಾರಿ ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳಿಗೆ ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಒಂದಿಷ್ಟು ಕಾರಣಗಳನ್ನು ನೀಡಿ. ಬೀದಿನಾಯಿಗಳನ್ನು ಹಿಡಿದು ಬೇರೆ ಕಡೆ ಬಿಟ್ಟು ಬರುವ ಅಥವಾ ಅವುಗಳ ಸಂತಾನಹರಣ ಚಿಕಿತ್ಸೆ ಮಾಡುವ ಕೆಲಸ ಆಗಿಲ್ಲಾ. ಪಟ್ಟಣ ಪಂಚಾಯಿತಿಯ ಬಹುತೇಕ ಸಿಬ್ಬಂದಿಗಳು ಅಧಿಕಾರಿಗಳು ನಿತ್ಯ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿಯೂ ಕಾರ್ಯನಿಮಿತ್ತ ಸಂಚರಿಸುತ್ತಾರೆ ಅಲ್ಲಿನ ಅಧಿಕಾರಿಗಳಿಗೆ ಪಟ್ಟಣದಲ್ಲಿರುವ ಬೀದಿ ನಾಯಿಗಳ ಹಾವಳಿಯ ಕುರಿತು ಅರಿವಿದೆ ಆದರೂ ಸಹ ಈ ಕುರಿತಾಗಿ ನಿಯಂತ್ರಣಕ್ಕಾಗಲಿ ಶಸ್ತ್ರಚಿಕಿತ್ಸೆಗಾಗಲಿ ಮುಂದಾಗದೆ ನಿರ್ಲಕ್ಷವನ್ನ ತೋರುವ ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗೆ ಮನವಿಗೆ ಸ್ಪಂದಿಸುತ್ತಿಲ್ಲ.
ಈಗಾಗಲೇ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಅವುಗಳ ಸಂಖ್ಯೆಯು ಮಿತಿಮೀರಿದೆ ಅವುಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಇನ್ನೇನು ಕೆಲ ದಿನಗಳಲ್ಲಿ ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದ್ದು ಹೆಚ್ಚು ಪಾಲು ಮಕ್ಕಳು ಮನೆಯ ಸಮೀಪ ರಸ್ತೆಗಳಲ್ಲಿ ಆಟೋಟವನ್ನ ಆಡಲೀದ್ದು ಮಕ್ಕಳ ಮೇಲೆ ಬೀದಿ ನಾಯಿಗಳಿಂದ ದಾಳಿ ನಡೆಯುವ ಸಾಧ್ಯತೆಗಳು ಹೆಚ್ಚಿದೆ ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮವನ್ನ ಕೈಗೊಳ್ಳುತ್ತಿಲ್ಲ ಬದಲಿಗೆ ಯಾವುದೋ ಕಾರಣವನ್ನು ಮುಂದಿಟ್ಟುಕೊಂಡು ಕಾಲ ಹರಣ ಮಾಡುತ್ತಿದೆ. ಅಧಿಕಾರಿಗಳು ಹೇಳುವಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಯಾರು ಭಾಗಿಯಾಗದಿದ್ದರೆ ಬೀದಿ ನಾಯಿಗಳ ನಿಯಂತ್ರಣ ಇಲಾಖೆ ಮಾಡುವುದೇ ಇಲ್ಲವೇ.??? ಅದನ್ನು ಹಾಗೆಯೇ ಬಿಡುತ್ತದೆಯೇ..??
ಅಶ್ವಿನಿ ಕುಮಾರ್.
ಮಾಜಿ ಪಟ್ಟಣ ಪಂಚಾಯತ್ ಸದಸ್ಯ.
ಈಗಾಗಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿದ್ದು ವಿವಿಧ ಕಾರಣಗಳಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಈವರೆಗೂ ಯಾರು ಭಾಗಿಯಾಗಿಲ್ಲ, ಈ ಕುರಿತಾಗಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು ಅವರ ನಿರ್ದೇಶನದಂತೆ ಮುಂದೆ ಕ್ರಮ ಕೈಗೊಳ್ಳಲಾಗುವುದು.
ಹರೀಶ್ ಎಂ ಎನ್
ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತ್ ಹೊಸನಗರ
STRAY DOG...
Discover more from Prasarana news
Subscribe to get the latest posts sent to your email.
