G K B:ಗಣೇಶೋತ್ಸವ: ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ  ಶಾಸಕ ಬೇಳೂರು ಗೋಪಾಲಕೃಷ್ಣ ಆರ್ಥಿಕ ನೆರವು.

ಹೊಸನಗರ: ಗಣೇಶೋತ್ಸವ ಹಿನ್ನೆಲೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹೊಸನಗರ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳಿಗೆ ಆರ್ಥಿಕ ದೇಣಿಗೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮುಂಜಾನೆ ಇಂದ ತಾಲೂಕಿನ 185 ಕ್ಕೂ ವಿವಿಧ ಗಣೇಶೋತ್ಸವ  ಸಮಿತಿಗಳಿಗೆ ಆರ್ಥಿಕ ದೇಣಿಗೆ ನೀಡಿದರು. ಬಳಿಕ ಮಾತನಾಡಿದ ಅವರು ಈ ಬಾರಿಯ ಗಣೇಶ ಚತುರ್ಥಿಯನ್ನು ಎಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸಿ ಜೊತೆಗೆ ಇಲಾಖೆ ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕೆಲಸವನ್ನು ಸಹ ಸಮಿತಿ ಮಾಡಬೇಕಿದೆ ಅಲ್ಲದೆ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸುವ ಮೂಲಕ ಎಲ್ಲಾ ಸಮಿತಿಗಳು ಮಾದರಿಯಾಗಬೇಕು ಎಂದು ತಿಳಿಸಿದರು ಜೊತೆಗೆ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸಮಿತಿಯು ಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ಮೂಲಸೌಕರ್ಯಕ್ಕೆ ಆದ್ಯತೆ

ಕೇವಲ ಆರ್ಥಿಕ ಸಹಾಯವಷ್ಟೇ ಅಲ್ಲದೆ, ಹಬ್ಬದ ಮೆರವಣಿಗೆಗಳು ಸುಗಮವಾಗಿ ಸಾಗಲು ಕ್ಷೇತ್ರದಲ್ಲಿನ ರಸ್ತೆಗಳ ದುರಸ್ತಿ, ವಿದ್ಯುತ್ ದೀಪಗಳ ವ್ಯವಸ್ಥೆ ಮತ್ತು ಅಗತ್ಯ ರಕ್ಷಣೆ ಒದಗಿಸಲು ಸ್ಥಳೀಯ ಪಟ್ಟಣ ಪಂಚಾಯತ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕರು ಮತ್ತು ಭಕ್ತಾದಿಗಳು ಯಾವುದೇ ತೊಂದರೆಯಿಲ್ಲದೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಆರಾಧಿಸುವ ಮೂಲಕ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು
ಈ ಸಂದರ್ಬದಲ್ಲಿ ಚಿದಂಬರ ಹೂವಿನ ಕೋಣೆ, ಸುಬ್ರಹ್ಮಣ್ಯ ಮಾಸ್ತಿಕಟ್ಟೆ,ಸಾಕಮ್ಮ, ಸದಾಶಿವ ಶೆಟ್ಟಿ, ಗೋಪಿನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ, ನಾಸಿರ್, ಉಬೇದ್, ಗುರು ಜಯನಗರ, ಚೇತನ್ ದಾಸ ಉಪಸ್ಥಿತರಿದ್ದರು.

G K B..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading