
ಸಾಗರ: ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನಿರಿನಲ್ಲಿ ನಿನ್ನೆ ತೆಪ್ಪದ ಮೂಲಕ ಒಂದು ದಡದಿಂದ ಇನ್ನೊಂದು ದಡಕ್ಕೆ ತೆರಳಿದ್ದ ಐವರ ಪೈಕಿ ಮೂವರು ಹಿಂದಿರುಗುವಾಗ ನೀರು ಪಾಲಾದ ಘಟನೆ ನಡೆದಿತ್ತು.
ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರ ಮೂಲದ ಐವರು ಯುವಕರು ಕಳಸವಳ್ಳಿ ಬದಿಯ ಹಿನ್ನೀರಿಗೆ ತೆರಳಿದ್ದಾರೆ. ಅಲ್ಲಿಯೇ ದಡದಲ್ಲಿದ್ದ ತೆಪ್ಪವನ್ನು ಬಳಸಿ ಹಿನ್ನೀರಿನ ಇನ್ನೊಂದು ಬದಿಗೆ ಹೋಗಿದ್ದಾರೆ.

ಯುವಕರು ಅಲ್ಲಿಯೇ ಊಟ ಮಾಡಿ. ಅಲ್ಲಿಂದ ವಾಪಸ್ ಬರುವಾಗ ತೆಪ್ಪದ ಒಳಗೆ ನೀರು ನುಗ್ಗಲು ಆರಂಭವಾಗಿದೆ. ಪರಿಣಾಮ ತೆಪ್ಪದಲ್ಲಿದ್ದವರು ಮುಳುಗುವಂತಾಗಿದೆ. ಆಗ ಐವರ ಪೈಕಿ ಇಬ್ಬರು ಈಜಿಕೊಂಡು ದಡಕ್ಕೆ ಬಂದಿದ್ದಾರೆ. ಉಳಿದ ಮೂವರು ನೀರಿನಲ್ಲಿ ಮುಳುಗಿದ್ದರು
ನೀರಿನಲ್ಲಿ ಮುಳುಗಿದವರನ್ನ ಚೇತನ್ ರಾಜು, ಸಂದೀಪ್ ಎಂದು ಗುರುತಿಸಲಾಗಿದ್ದು. ಇದೀಗ ನಾಪತ್ತೆಯಾದ ಸ್ಥಳದಲ್ಲೇ ಮೂವರ ಮೃತದೇಹ ಪತ್ತೆಯಾಗಿದ್ದು ಘಟನಾ ಸ್ಥಳದಲ್ಲಿ ಕಾರ್ಗಲ್ ಪೋಲಿಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಹೋಳಿ ಹಾಗೂ ಸಿಬ್ಬಂದಿ ಗಳು ಮಹಜರು ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.
BACKWATER-DEAD BODY
Discover more from Prasarana news
Subscribe to get the latest posts sent to your email.
