
ಹೊಸನಗರ: ದೀವರ (ಈಡಿಗರ) ಹಿತರಕ್ಷಣಾ ವೇದಿಕೆಯ ತೀವ್ರ ಹೋರಾಟಕ್ಕೆ ಮಣಿದ ದೀವರ ವಿಧ್ಯಾವರ್ಧಕ (ಈಡಿಗ) ಸಂಘದ ಪದಾಧಿಕಾರಿಗಳು ತಮ್ಮ ಅಕ್ರಮಗಳನ್ನು ಸರಿಪಡಿಸಿಕೊಂಡು ಒಟ್ಟಾಗಿ ಹೋಗಲು ಸಮಾಜದ ಹಿರಿಯರಾದ ಶ್ರೀ ಕಾಗೋಡು ತಿಮ್ಮಪ್ಪ ರವರ ಮಾತಿಗೆ ಒಪ್ಪಿಕೊಂಡ ಹಿನ್ನಲೆಯಲ್ಲಿ ಹೋರಾಟವನ್ನು ತಾತ್ಕಾಲಿಕ ನಿಲುಗಡೆಗೊಳಿಸಿ, ಸುಮಾರು ಒಂದು ಸಾವಿರ ಮಂದಿ ಸಮಾಜದ ಬಾಂಧವರು ಒಟ್ಟಾಗಿ ಸರ್ಕಲ್‌ನಿಂದ ಈಡಿಗರ ಸಂಘದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ. ಮಾವಿನಕೊಪ್ಪ
ಈ ಹಿನ್ನಲೆಯಲ್ಲಿ ಹಿತರಕ್ಷಣಾ ವೇದಿಕೆಯ ಮುಖಂಡರುಗಳು ಸಮಾಜದ ಹಿರಿಯರಾದ ಶ್ರೀ ಕಾಗೋಡು ತಿಮ್ಮಪ್ಪರವರನ್ನು, ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ರವರನ್ನು ಹಾಗೂ ಶ್ರೀ ಹೆಚ್.ಹಾಲಪ್ಪ ಹರತಾಳು ರವರನ್ನು ಬೇಟಿ ಮಾಡಿ ಮಾತುಕತೆ ನಡೆಸಿರುವುದು ಸಹಾ ಗಮನಾರ್ಹ ಪರಿಣಾಮ ಬೀರಿದೆ.
ಈಡಿಗ ಸಂಘದ ಸ್ವಘೋಷಿತ ಪದಾಧಿಕಾರಿಗಳಿಗೆ ಡಿಸೆಂಬರ್ 31ರವರೆಗೆ ಗಡುವು ನೀಡಿದ್ದು ಉದ್ಘಾಟನಾ ಕಾರ್ಯಕ್ರಮದ ನಂತರ ಸಾಮೂಹಿಕ ರಾಜೀನಾಮೆ ನೀಡಿ ಮುಕ್ತವಾದ ಲೆಕ್ಕಪತ್ರ ತಪಾಸಣೆಗೆ ಅವಕಾಶ ಮಾಡಿಕೊಡಲು ಅಂತಿಮ ಗಡುವು ನೀಡಲಾಗಿದೆ. ಮೀನಾ ಮೇಷಾ ಮಾಡಿದಲ್ಲಿ ಮೊದಲಿಗಿಂತ ಭಿನ್ನವಾದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಪತ್ರಿಕಾಗೊಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸೊನಲೆ ಶ್ರೀನಿವಾಸ, ಕಾರ್ಯದರ್ಶಿ ಎನ್.ಈ.ಸ್ವಾಮಿ ನೇವೆ, ಗೌರವಧ್ಯಕ್ಷರಾದ ಶ್ರೀ ಎಂ.ಕುಮಾರ ಮಂಡಾನಿ, ಉಪಾಧ್ಯಕ್ಷರಾದ ಶ್ರೀ ಹೆಚ್.ಆರ್.ಶ್ರೀಧರ ಹಾರೆಕೊಪ್ಪ, ಶ್ರೀ ವಾಸಪ್ಪ ಮಾಸ್ತಿಕಟ್ಟೆ, ಭಾಸ್ಕರ ಮುಳುಗೇರ, ಮಾಕನಕಟ್ಟೆ ಗಣಪತಿ ಎಡಗುಡ್ಡೆ ಷಣ್ಮುಖಪ್ಪ, ಕಾಪಿ ಮಹೇಶ್ ಹಾಗೂ ವೇದಿಕೆಯ ನಿರ್ದೇಶಕರುಗಳು ಹಾಜರಿದ್ದರು.
TEMPORARY SUSPENSION..
Discover more from Prasarana news
Subscribe to get the latest posts sent to your email.
