
ಹೊಸನಗರ: ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಸ್ತಾಪ ಬಂದಿರುವುದನ್ನು ವಿರೋಧಿಸಿ ಮೇ 7ರಂದು ಸಾಗರದ ಶಿವಪ್ಪ ನಾಯಕ ವೃತ್ತದಿಂದ 10:30ಕ್ಕೆ ಪಕ್ಷಾತೀತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೇ ಎಂದು ಜನ ಹೋರಾಟ ವೇದಿಕೆ ಅಧ್ಯಕ್ಷರಾದ ಇಂಧೂದರ ಗೌಡ ಬೇಸೂರು ತಿಳಿಸಿದರು.
ಈ ಕುರಿತು ಕಳೂರು ಸಹಕಾರ ಸಂಘದ ನೂತನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಿದ ಅವರು ಮಲೆನಾಡಿನ ಭವಿಷ್ಯಕ್ಕೆ ಮಾರಕವಾಗುವ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ನಾವು ಕಟುವಾಗಿ ವಿರೋಧಿಸುತ್ತಿದ್ದು ಯಾವುದೆ ಕಾರಣಕ್ಕೂ ನಮ್ಮ ಭಾಗದಲ್ಲಿ ಅವಕಾಶ ನೀಡಬಾರದು. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಇಲ್ಲಿ ಅಣು ಸ್ಥಾವರ ನಿರ್ಮಾಣವಾದರೆ ಸಾಗರ ಹೊಸನಗರ ಭಾಗದ ನಮಗೆ ಇದೊಂದು ತೂಗುಗತ್ತಿಯಾಗಲಿದೆ ಎಂದು ಹೇಳಿದರು.
ಪ್ರಸ್ತಾವಿತ ಅಣು ಸ್ಥಾವರದ ವಿರುದ್ದದ ಹೋರಾಟ ನಮ್ಮ ಅಳಿವು, ಉಳಿವಿನ ಪ್ರಶ್ನೆಯಾಗಿದೆ ಇದು ಕೇವಲ ಬೇಸೂರು ಗ್ರಾಮಕ್ಕೆ ಮಾತ್ರ ಸೀಮಿತವಾದ ಹೋರಾಟವಲ್ಲ ಸಾಗರ ಹೊಸನಗರ ಭಾಗದ ಪ್ರತಿಯೊಬ್ಬರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಬೇಸೂರು ಗ್ರಾಮದಲ್ಲಿ 177 ಮನೆಗಳಿದ್ದು ಒಂದು ವೇಳೆ ಅಲ್ಲಿ ಸರ್ಕಾರ ಅಣು ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಿ ಅಲ್ಲಿ ವಾಸವಿರುವ ನಮಗೆಲ್ಲ ದೊಡ್ಡಮಟ್ಟದ ಪರಿಹಾರವನ್ನು ನೀಡಿ ಬೇರೆ ಸ್ಥಳಾಂತರಿಸ ಬಹುದು ಆದರೆ ಗ್ರಾಮದ ಪಕ್ಕದಲ್ಲಿ ಇರುವಂತಹ ಜನರ ಬದುಕಿಗೆ ಇದು ಗಂಡಾಂತರವನ್ನು ತರಲಿದೆ ಇದು ಕೇವಲ ಬೇಸೂರು ಗ್ರಾಮದ ಸಮಸ್ಯೆಯಲ್ಲ ಸಾಗರ ಹೊಸನಗರ ತಾಲೂಕಿನ ನೆಲಜಲ ಬದುಕಿನ ಸಮಸ್ಯೆ ಎಂದರು
ಈಗಾಗಲೇ ಹಲವು ಜಲ ವಿದ್ಯುತ್ ಯೋಜನೆಗಾಗಿ ಹೊಸನಗರ ಸಾಗರ ಭಾಗದ ಜನ ಮುಳುಗಡೆ ಸಂತ್ರಸ್ತರಾಗಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಈಗ ಅಣು ಸ್ಥಾವರ ನಿರ್ಮಾಣ ಪ್ರಸ್ತಾಪ ಕೇಳಿ ಬಂದಿರುವುದು ಆಘಾತಕಾರಿ ಸಂಗತಿಯಾಗಿದೆ. ಇದನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ಮಲೆನಾಡಿನ ಸಮಸ್ತ ಜನರು ಕೈಜೋಡಿಸಬೇಕು ಎಂದು ಅಣು ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಮನವಿ ಮಾಡಿದರು.ಈ ಪತ್ರಿಕಾಗೋಷ್ಠಿಯಲ್ಲಿ ಪರಿಸರವಾದಿ ಸೀತಾರಾಮ್, ಕಡೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿನಯ್ ದುಮ್ಮ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಯರಾಮ್, ಕಲ್ಯಾಣಪ್ಪ ಗೌಡ, ಮುಂತಾದವರು ಉಪಸ್ಥಿತರಿದ್ದರು
PRASARANANEWS..
Discover more from Prasarana news
Subscribe to get the latest posts sent to your email.
