JATHA:ಮತದಾನವೆಂಬುದು ಸಂವಿಧಾನದ ಮೂಲಕ  ಎಲ್ಲರಿಗೂ ಸಿಕ್ಕಿರುವ ಹಕ್ಕು: ಮೇದಿನಿ ಕೆ ಎಸ್.

ಹೊಸನಗರ: ಮತದಾನವೆಂಬುದು ಸಂವಿಧಾನದ ಮೂಲಕ ಎಲ್ಲರಿಗೆ ಸಿಕ್ಕಿರುವಂತಹ ಹಕ್ಕು ಅದನ್ನ ಕಡ್ಡಾಯವಾಗಿ ಚಲಾಯಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು  ಕೊಡಚಾದ್ರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಮೇದಿನಿ ಕೆಎಸ್ ತಿಳಿಸಿದರು.
ಹೊಸನಗರದ ತಾಲ್ಲೂಕು ಕಛೇರಿ ಹಾಗೂ ಕಾಲೇಜಿನ ವಿವಿಧ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಜಾಥಾದಲ್ಲಿ  ಮಾತನಾಡಿದ ಅವರು ಹದಿನೆಂಟು ವರ್ಷ ತುಂಬಿರುವ ಹಾಗೂ ಅದಕ್ಕಿಂತ ಮೇಲ್ಪಟ್ಟ ಭಾರತದ ಪ್ರತಿಯೊಬ್ಬ ನಾಗರಿಕನೂ  ಚುನಾವಣೆಯಲ್ಲಿ  ಮತದಾನ ಮಾಡಬೇಕು.  ಅರ್ಹ ಅಭ್ಯರ್ಥಿಗಳಿಗೆ, ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು, ಈ ಮತದಾನವು ಯಾವುದೇ ಅಡೆತಡೆಯಿಲ್ಲದೆ ನಡೆಯಬೇಕಾದರೆ ಮತದಾರರ ಪಟ್ಟಿಯಲ್ಲಿ ನಮ್ಮ‌ಹೆಸರು ಇರುವಂತೆ ನೋಡಿಕೊಳ್ಳಬೇಕು, ಆ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದರು.ಮುಂಬರುವ ಎಲ್ಲ ಚುನಾವಣೆಯಲ್ಲಿ ತಪ್ಪದೇ ಮಾತದಾನ ಮಾಡಬೇಕೆಂದರೆ, ಈಗಲೇ ನಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು, ಅದಕ್ಕೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ತಮ್ಮ ಹೆಸರು ಹಾಗೂ ತಮ್ಮ ಕುಟುಂಬದವರ ಹೆಸರನ್ನು ಮತಪಟ್ಟಿಯಲ್ಲಿ ಇರುವುದನ್ನು ದೃಢಪಡಿಸಿಕೊಳ್ಳಬೇಕು ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಶ್ರೀಪತಿ ಕೆ.ಯವರು ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯನ್ನು ಪರೀಕ್ಷಿಸಿಕೊಳ್ಳಿ, ಇದಕ್ಕೆ ನಿಮ್ಮ ಭಾಗದ ಬಿಎಲ್ಓಗಳನ್ನು ಸಂಪರ್ಕಿಸಿಕೊಳ್ಳಿ‌ ಎಂದರು.
ಕಾಲೇಜಿನ ಎನ್ ಎಸ್ ಎಸ್, ರೋವರ್ಸ್ ರೇಂಜರ್ಸ್, ಎನ್ ಸಿ ಸಿ, ಹಾಗೂ ಯುವ ರೆಡ್ ಕ್ರಾಸ್  ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಕಾಲೇಜಿನಿಂದ ಹೊಸನಗರದ ಮಾವಿನಕೊಪ್ಪ ವೃತ್ತದವರೆಗೆ ಜಾಥಾ ಹೋಗಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರು ಮತ್ತು ತಾಲ್ಲೂಕು ಕಛೇರಿಯ ಅಧಿಕಾರಿಗಳಾದ ಸುಧೀಂದ್ರ ಕುಮಾರ್, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಎಂ ಎನ್ ಹರೀಶ್,ಚುನಾವಣೆ ಶಿರಸ್ತೆದಾರ್ ಸತೀಶ್ ಬಿ ಜಿ ಪಾಲ್ಗೊಂಡಿದ್ದರು.

JATHA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading