
ಹೊಸನಗರ: ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಕುಂದಗಲ್ ಗ್ರಾಮದಲ್ಲಿ ಬಾರೀ ಪ್ರಮಾಣದ ಭೂಕುಸಿತ ಕಂಡು ಬಂದಿದ್ದು ಆತಂಕ ಸೃಷ್ಟಿಸಿದೆ.
ಸುಮಾರು 200 ಮೀ ನಷ್ಟು ಉದ್ದ, ಒಂದುವರೆ ಅಡಿಯಷ್ಟು ಕೆಳಗೆ ಭೂಮಿ ಕುಸಿತ ಕಂಡು ಬಂದಿದೆ. ಕಳೆದ ವರ್ಷ ಇದೇ ಜಾಗದಲ್ಲಿ ಭೂಮಿ ಕುಸಿತ ಕಂಡು ಬಂದಿದ್ದು ಸಾಗರ ಎಸಿ, ಗಣಿ ಮತ್ತು ಭೂಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದ್ದರು.
ಸ್ಥಳೀಯ ನಿವಾಸಿ ರಾಜಶೇಖರ್, ಕಳೆದ ವರ್ಷದ ಮಾದರಿಯಲ್ಲೇ ಕುಸಿತ ಕಂಡುಬಂದಿದ್ದು, ಈ ವರ್ಷ ಸ್ವಲ್ಪ ಹೆಚ್ಚೇ ಭೂಮಿ ಕುಸಿದಿದೆ. ಕಳೆದ ಬಾರಿ ಆಗಮಿಸಿದ್ದ ಅಧಿಕಾರಿಗಳು ಸ್ವಲ್ಪ ಕಾದು ನೋಡೋಣ ಎಂದಿದ್ದರು. ಈಗ ಮತ್ತೆ ಕುಸಿತ ಕಂಡು ಬಂದಿದ್ದು ಗ್ರಾಮಸ್ಥರು ಭಯಪಡುವಂತಾಗಿದೆ ಎಂದರು..
LANDSLIDE...
Discover more from Prasarana news
Subscribe to get the latest posts sent to your email.
