
ಹೊಸನಗರ:ಮಲೆನಾಡ ನಡುಮನೆಯಾದ ಹೊಸನಗರದ ಭಾಗದಲ್ಲಿ ವರ್ಷದ ಮೊದಲ ಮಳೆ ಅಬ್ಬರಿಸಿದೆ. ಹೊಸನಗರ ಪಟ್ಟಣ ಸೇರಿದಂತೆ ವಿವಿಧಡೆ ಕೆಲ ಗಂಟೆಗಳ ಕಾಲ ವಿಪರೀತ ಗಾಳಿ ಸಹಿತ ಮಳೆ ಸುರಿದಿದ್ದು ಬಿಸಿಲ ದಾಹದಿಂದ ದಣಿದಿದ್ದ ಭೂಮಿಗೆ ತಮ್ ತೆಪೇರೆದಂತಾಗಿದೆ. ಭಾರಿ ಮಳೆಗೆ ಪಟ್ಟಣದ ಎರಡನೇ ವಾರ್ಡ್ ನ ನಿವಾಸಿಯಾದ ಅಪ್ಪಣ್ಣ ಎಂಬುವವರ ಮನೆ ಮೇಲೆ ತೆಂಗಿನ ಮರವೊಂದು ಬುಡಸಮೇತ ಬಿದ್ದು ಮನೆ ಹಾಗೂ ಗೃಹಪಯೋಗಿ ವಸ್ತುಗಳು ಸಂಪೂರ್ಣ ಜಖಂಗೊಂಡಿವೆ.ಹಾಗೆಯೇ ನಾಲ್ಕನೇ ವಾರ್ಡಿನ ಸಂತೆ ಮಾರುಕಟ್ಟೆಯ ಸಮೀಪದ ಮುಖ್ಯ ರಸ್ತೆಯಲ್ಲೂ ಸಹ ಮರ ಒಂದು ಬಿದ್ದಿದ್ದು ಮನೆಗೆ ಹಾನಿಯಾಗಿದೆ ಮೊದಲ ವರ್ಷಧಾರೆಯ ಅಬ್ಬರ ಕಂಡು ಮಲೆನಾಡಿಗರು ಹೈರಾಣಾಗಿದ್ದಾರೆ...
VARSHADHARE....
