
ಹೊಸನಗರ: ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ಪಟ್ಟಣ ಪಂಚಾಯತಿ ಅಧಿಕಾರಿಗಳ ಧಿಡೀರ್ ದಾಳಿ ನಡೆಸಿ ಹತ್ತಾರು ಕೆ.ಜಿ ಯಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದು ಸುಮಾರು ರೂ ಐದು ಸಾವಿರದಷ್ಟು ದಂಡ ವಸೂಲಿ ಮಾಡಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಸರಕಾರ ಆದೇಶಿಸಿದ ಬಳಿಕವೂ ವ್ಯಾಪಾರಿಗಳು ಅಧಿಕಾರಿಗಳ ಕಣ್ ತಪ್ಪಿಸಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರು. ಸಾರ್ವಜನಿಕ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು, ದಾಳಿ ವೇಳೆ ಹಲವು ಅಂಗಡಿಗಳು ಪಂಚಾಯತಿ ಪರವಾನಿಗೆ ಪಡೆಯದೆ ಹಲವು ವರ್ಷಗಳಿಂದ ಅವ್ಯಾಹತವಾಗಿ ವ್ಯಾಪಾರಕ್ಕೆ ಮುಂದಾಗಿರುವ ಸಂಗತಿ ಬಹಿರಂಗಗೊಂಡಿದೆ. ಅಂತಹ ವ್ತಾಪಾರಿಗಳಿಗೆ ಸೂಕ್ತ ಪರವಾನಗಿ ಪಡೆದು ವ್ಯವಹಾರ ನಡೆಸುವಂತೆ, ತಪ್ಪಿದಲ್ಲಿ ಮಳಿಗೆಗೆ ಬೀಗ ಜಡಿಯುವುದಾಗಿ ಮುಖ್ಯಾಧಿಕಾರಿ ಎಂ.ಎನ್.ಹರೀಶ್ ಎಚ್ಚರಿಕೆ ನೀಡಿದ್ದಾರೆ. ಪ್ರಥಮ ದರ್ಜೆ ಗುಮಾಸ್ತ ಮಂಜುನಾಥ, ಕರ ವಸೂಲಿಗಾರ ಪರಶುರಾಮ, ಮೇಸ್ತ್ರಿ ನಾಗರಾಜ್, ಆರೋಗ್ಯ ನಿರೀಕ್ಷಕಿ ಸೇರಿದಂತೆ ಸಿಬ್ಬಂದಿಗಳ ಸಾಥ್ ನೀಡಿದ್ದು ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಈ ದಾಳಿ ನಡೆದಿದೆ
PATTANA PANCHAYAT
Discover more from Prasarana news
Subscribe to get the latest posts sent to your email.
