KODACHADRI:ಕೊಡಚಾದ್ರಿ ಬೆಟ್ಟದಿಂದ ಆಯತಪ್ಪಿ ಕೆಳಗೆ ಬಿದ್ದ ಪ್ರವಾಸಿಗ.
ಪ್ರವಾಸಿ ಜೀಪ್ ಚಾಲಕರ ಸಮಯ ಪ್ರಜ್ಞೆಯಿಂದ ಪ್ರವಾಸಿಗನ ರಕ್ಷಣೆ..

ಹೊಸನಗರ: ತಾಲೂಕಿನ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗನೊಬ್ಬ ಆಯತಪ್ಪಿ ಬೆಟ್ಟದಿಂದ ಕೆಳಗೆ ಬಿದ್ದ ಘಟನೆ ಭಾನುವಾರ ಸಂಭವಿಸಿದೆ.
ಕೊಡಚಾದ್ರಿ ಬೆಟ್ಟ ವೀಕ್ಷಣೆಗೆಂದು ಬಂದಿದ್ದ ಪ್ರದೀಪ್ ಎಂಬ ಪ್ರವಾಸಿಗನೊಬ್ಬ ಬೆಟ್ಟದ ಪ್ರಮುಖ ವೀಕ್ಷಣೆಯ ಸ್ಥಳ ಶಂಕರಚಾರ್ಯ ಪೀಠದ ಸಮೀಪ  ತೆರಳುವಾಗ ತಲೆ ಸುತ್ತಿ ಆಯತಪ್ಪಿ ಕೆಳಗೆ ಬಿದ್ದಿದು ಕೂಡಲೇ ಅದನ್ನು ಗಮನಿಸಿದ ಕೊಲ್ಲೂರು,ಕುಂಬ್ಳೆ,ನಿಟ್ಟೂರು, ಸಂಪೇಕಟ್ಟ ಹಾಗೂ ಕಟ್ಟಿನ ಹೊಳೆ ಬಾಗದ ಪ್ರವಾಸಿ ಜೀಪ್ ಚಾಲಕರು ಅವರನ್ನ ರಕ್ಷಿಸಿ ಪ್ರಾಣಪಾಯದಿಂದ ಪಾರು ಮಾಡಿ ಅವರನ್ನು ನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ ಕಳುಹಿಸಿಕೊಟ್ಟಿದ್ದಾರೆ.
ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಪ್ರವಾಸಿಗ ಕುಮಟಾ ಮೂಲದ ಪ್ರದೀಪ್ ಎನ್ನಲಾಗಿದೆ.

ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಮೂಲ ಸೌಕರ್ಯಗಳ ಕೊರತೆ.

ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟದಲ್ಲಿ ಮೂಲ ಸೌಕರ್ಯ ಕೊರತೆ ಇದೆ ಇಲ್ಲಿ ಪ್ರಥಮ ಚಿಕಿತ್ಸೆ, ಗಸ್ತು ಸಿಬ್ಬಂದಿಗಳ ಕೊರತೆ, ವೈದ್ಯಕೀಯ ಸೇವೆ ಇಲ್ಲದಂತಾಗಿದೆ ಇಲಾಖೆ ಪ್ರತಿ ಪ್ರವಾಸಿಗನಿಗೂ ಕೊಡಚಾದ್ರಿ ವೀಕ್ಷಣೆಗೆ ಒಂದಿಷ್ಟು ಶುಲ್ಕವನ್ನು ಪಡೆಯುತ್ತದೆ ಅಲ್ಲದೆ ಚೀಪ್ ಮಾಲೀಕರಿಗೆ, ಪ್ರವಾಸಿಗರಿಗೆ, ಕಟ್ಟುನಿಟ್ಟಿನ ನಿಬಂಧನೆಗಳನ್ನು ಹಾಕುತ್ತಾರೆ ಆದರೆ ನೂರಾರು ಮಂದಿ ಬಂದು ಹೋಗುವಂತ ಪ್ರವಾಸಿ ತಾಣದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸದೆ ಇರುವುದು ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ.

KODACHADRI..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading