
ಹೊಸನಗರ:ಯುವಜನರಲ್ಲಿ ನಾಯಕತ್ವದ ಗುಣಗಳು ಬೆಳೆಸಿಕೊಳ್ಳುವುದರಿಂದ ನಾಯಕತ್ವದ ಗುಣ ಹಾಗೂ ವೈಯಕ್ತಿಕ ವಿಕಾಸದ ಮಹತ್ವ ತಿಳಿಯಲಿದೆ ಎಂದು ಉಪನ್ಯಾಸಕ ವಿನಾಯಕ ಅರಮನೆ ತಿಳಿಸಿದರು.
ಬಟ್ಟೆಮಲ್ಲಪ್ಪ ಸಾರಾ ಸಂಸ್ಥೆಯಲ್ಲಿ
ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್, ಹೊಸನಗರ ಹಾಗೂ ಜೆಸಿಐ ಹೊಸನಗರ ಡೈಮಂಡ್ ಸಹಯೋಗದಲ್ಲಿ ಆಯೋಜಿಸಿದ್ದ **“IGNITE GenZ Connect”** ವಿಶೇಷ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುವಜನರಲ್ಲಿ ಆತ್ಮವಿಶ್ವಾಸ, ಉತ್ತಮ ಸಂವಹನ, ನಾಯಕತ್ವದ ಗುಣ ಹಾಗೂ ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಇತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಅವರು ವಿವಿಧ ಚಟುವಟಿಕೆಗಳು, ಪ್ರಾಯೋಗಿಕ ಕಲಿಕೆ ಹಾಗೂ ವೈಯಕ್ತಿಕ ವಿಕಸನದ ಮೂಲಕ ನಾಯಕತ್ವದ ಅಗತ್ಯತೆ ಮತ್ತು ಅದರ ಮಹತ್ವವನ್ನು ಯುವಜನರಿಗೆ ಪರಿಚಯಿಸಿದರು.
ಕಾರ್ಯಕ್ರಮಕ್ಕೆ ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್ ಮಾಲೀಕ ವಿನಾಯಕ ಕರಬ ಜೆಸಿಐ ಹೊಸನಗರ ಡೈಮಂಡ್ ಅಧ್ಯಕ್ಷ ಜೆಸಿ ಸಂದೀಪ್ ಹೆಚ್ ಹಾಗೂ ಸಾರಾ ಸಂಸ್ಥೆಯ ಪ್ರಮುಖರು ಸಹಕಾರ ನೀಡಿದರು. ಯುವಜನರು ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್‌ನ ನೂತನ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಲಾಯಿತು. ಸಂಸ್ಥೆಯ ವಿವಿಧ ಕೋರ್ಸ್‌ಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ವೆಬ್‌ಸೈಟ್ ರೂಪಿಸಲಾಗಿದೆ.
ಇದೇ ಸಂದರ್ಭದಲ್ಲಿ ತರಬೇತಿ ಪೂರ್ಣಗೊಳಿಸಿದ 38 ಯುವಜನರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಸಮಾರೋಪ ನೀಡಲಾಯಿತು. ಸ್ವಾತಂತ್ರ್ಯ ದಿನದಂದು ನಡೆದ ಈ ಕಾರ್ಯಕ್ರಮವು ಯುವಜನರಲ್ಲಿ ಆತ್ಮವಿಶ್ವಾಸ, ಹೊಸ ಚಿಂತನೆ ಹಾಗೂ ನಾಯಕತ್ವದ ಆಸಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು..
GEN Z CONNECT..
Discover more from Prasarana news
Subscribe to get the latest posts sent to your email.
