
ಹೊಸನಗರ:ರಾಜ್ಯ ಸರಕಾರವು ಸ್ವ-ಉದ್ಯೋಗ ಹಾಗೂ ಉದ್ಯಮಶೀಲತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮ ಜಾರಿಗೊಳಿಸಿದ್ದು, ಯುವಕ ಯುವತಿಯರು ಪ್ರಯೋಜನ ಪಡೆದು ಸ್ವಂತ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಗ್ರಾಮೀಣ ಕೈಗಾರಿಕ ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರ ಸಹಯೋಗದೊಂದಿಗೆ ಉದ್ಯಮಶೀಲತಾ ಜಾಗೃತಿ ಶಿಬಿರ ಹಾಗೂ ಸುಧಾರಿತ ಉಪಕರಣಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಮಟ್ಟದಲ್ಲಿ ಇಂತಹ ಶಿಬಿರ ಏರ್ಪಡಿಸುವ ಮೂಲಕ ಯುವಜನತೆಯಲ್ಲಿ ಸ್ವ-ಉದ್ಯೋಗ ಕಾರ್ಯಕ್ರಮ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಅಲ್ಲದೆ ಸ್ವ ಉದ್ಯೋಗ ಒಂದು ಕುಟುಂಬ ಸದೃಢ ಬದುಕನ್ನ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು ಅಲ್ಲದೆ ಇದೆ ಸಂದರ್ಬದಲ್ಲಿ ಮೀನುಗಾರಿಕ ಇಲಾಖೆ ಸಾಗರ 25-26 ನೇ ಸಾಲಿನ ಮೀನುಗಾರಿಕೆ ಇಲಾಖೆ ರಾಜ್ಯ ವಲಯ ಹಾಗೂ ಜಿಲ್ಲಾ ವಲಯ ಯೋಜನೆಯಡಿ ಆಯ್ಕೆಯಾದ ಪಾಲನುಭವಿಗಳಿಗೆ ಮೀನುಗಾರಿಕಾ ಸಲಕರಣೆ ಮತ್ತು ಪ್ಲಂಬರ್ ಗ್ಲಾಸ್ ಹರಿ ಗೋಲು ಹಾಗೂ ಪೂರಕ ಸಾಮಗ್ರಿಗಳನ್ನ ವಿತರಿಸಿದರು ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಂಬರ್ ಹೂವಿನ ಕೋಣೆ, ತಾಲೂಕು ದಂಡಾಧಿಕಾರಿಗಳಾದ ಭರತ್ ರಾಜ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್ ಬಗರ್ ಕುo ಸಮಿತಿಯ ಸದಸ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
TOOL KIT..
