HOSANAGARA:ತ್ರಿಣಿವೆ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗುರುಶಕ್ತಿ ವಿದ್ಯಾಧರ ರಾವ್ ಆಯ್ಕೆ…

ಹೊಸನಗರ: ತಾಲ್ಲೂಕಿನ ತ್ರಿಣಿವೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುರುಭಕ್ತಿ ವಿದ್ಯಾಧರ ರಾವ್  ಉಪಾಧ್ಯಕ್ಷರಾಗಿ ಲಕ್ಷ್ಮಣ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
  ಸಂಘ ಸ್ಥಾಪನೆಗೊಂಡು 75 ವರ್ಷ ಸಂದಿದ್ದರೂ ಒಮ್ಮೆಯು ಚುನಾವಣೆ ಎದುರಿಸದೇ, ಪ್ರತಿ ಬಾರಿಯೂ  ನಿರ್ದೇಶಕರು ಅವಿರೋಧ ಆಯ್ಕೆಯಾಗಿ ಆಡಳಿತ ಮಂಡಳಿ ರಚಿಸುವ ಮೂಲಕ ಸಂಘವು ರಾಜ್ಯದಲ್ಲೇ ವಿಶಿಷ್ಠ ಸಾಧನೆ ಮೆರೆದಿದೆ. 1949ರಲ್ಲಿ ರೂ. 1900 ಮೊತ್ತ ಶೇರು ಬಂಡವಾಳದಲ್ಲಿ ಆರಂಭಗೊಂಡಿದ್ದ ಸಂಘವು ಇಂದು ವಾರ್ಷಿಕ ರೂ. 90 ಕೋಟಿ ವಹಿವಾಟು ನಡೆಸಿದೆ. ರೂ.28 ಕೋಟಿ ಠೇವಣಿ ಸಂಗ್ರಹಿಸಿ, ರೂ.25 ಕೋಟಿ ಸಾಲ ನೀಡಿದೆ. ಬೆಳೆಸಾಲ, ಕೃಷಿಸಾಲ, ವಾಹನ ಸಾಲ, ಅಡಮಾನ ಸಾಲ, ಖಾತೆ ಮೇಲಿನ ಸಾಲ ಸೇರಿದಂತೆ ಹಲವು ಬಗೆಯ ಸಾಲ ಸೌಲಭ್ಯಗಳನ್ನು ಶೇರುದಾರರಿಗೆ ನೀಡಿ ಲಾಭದಲ್ಲಿ ಸಾಗಿದೆ ಎಂದರು.


ಚುನಾವಣಾ ಅಧಿಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಕರಿಬಸವನಾಯ್ಕ, ನಿರ್ದೇಶಕರಾದ ಜಿ.ಎನ್. ಸುಧೀರ್, ರಾಜಕುಮಾರ್, ರಾಜಶ್ರೀ, ಹಾಲಮ್ಮ, ವಿಜಯಲಕ್ಷ್ಮಿ, ನೆಲ್ಲುಂಡೆ ವರುಣ್, ವಿನಾಯಕ ಅರೇಮನೆ,  ಉದಯಗೌಡ, ಸಂಪೇಮನೆ ಗುರುರಾಜ್, ಶಿವಕುಮಾರ್, ಸಿ.ಇ.ಒ ಕೆ.ಆರ್. ವೆಂಕಟೇಶ್ ಇದ್ದರು.

HOSANAGARA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe