
ಹಾಸನ: ಹೊಳೆನರಸೀಪುರದ ಕಿತ್ತಾನೆಬಳಿ ಸಂಭವಿಸಿದ ಅಪಘಾತದಲ್ಲಿ2023ನೇ ಬ್ಯಾಚ್ನ ಪ್ರೊಬೇಷನರಿ
ಐಪಿಎಸ್ ಅಧಿಕಾರಿ ಹರ್ಷವರ್ಧನ್(27)ಮೃತಪಟ್ಟಿದ್ದಾರೆ.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ
ಮುಗಿಸಿದ್ದ ಮಧ್ಯಪ್ರದೇಶ ಮೂಲದಹರ್ಷವರ್ಧನ್ ಹೊಳೆನರಸೀಪುರ ವಿಭಾಗದ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದರು.

ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು
ಭಾನುವಾರ ಮೈಸೂರಿಂದ ಹಾಸನಕ್ಕೆಪೊಲೀಸ್ ಜೀಪ್ನಲ್ಲಿ ಹೋಗುವಾಗ ಟಯರ್ ಸ್ಪೋಟಗೊಂಡು
ಪಲ್ಟಿಯಾಗಿ ಹರ್ಷವರ್ಧನ್, ಚಾಲಕ
ಮಂಜೇಗೌಡ ಗಾಯಗೊಂಡರು.ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಮಾರ್ಗಮಧ್ಯೆಕರೆತರುವಾಗ ಹರ್ಷವರ್ಧನ್
ಕೊನೆಯುಸಿರೆಳೆದಿದ್ದಾರೆ..
ACCIDENT:IPS
