RIPPAN PETE:ಮಕ್ಕಳ “ಹೊಯ್ಸಳ ಶೌರ್ಯ ಪ್ರಶಸ್ತಿ” ಪಡೆದ ಮೂರನೇ ತರಗತಿ ವಿದ್ಯಾರ್ಥಿ….

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರ 2024-25 ನೇ ಸಾಲಿನ ಮಕ್ಕಳ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಬಾಳೂರು ಸರಕಾರಿ ಶಾಲೆಯ ೩ ನೇ ತರಗತಿ ವಿದ್ಯಾರ್ಥಿ ಆನೆಕೆರೆ ನಿವಾಸಿ ರವಿ ಮತ್ತು ಲಕ್ಷಿö್ಮÃ ದಂಪತಿಗಳ ಪುತ್ರ ಮಣಿಕಂಠ ಆಯ್ಕೆಯಾಗಿದ್ದಾರೆ.
    ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನವನದ ಜವಹಾರ ಬಾಲ ಭವನದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಶುಕ್ರವಾರ ಪ್ರಶಸ್ತಿ ಪುರಸ್ಕೃತ ಮಾ|| ಮಣಿಕಂಠನಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ  ಪ್ರಧಾನ ಮಾಡಿದರು.
ಹಿನ್ನಲೆ: ಶಾಲೆಯಲ್ಲಿ ದಿನಾಂಕ: 01.09.2023 ರಂದು ಹೊಸನಗರ ತಾಲೂಕು, ಬಾಳೂರು ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಭುವನನ ಶಾಲಾ ಬ್ಯಾಗಿನಲ್ಲಿದ್ದ ನಾಗರಹಾವನ್ನು ಕಂಡು ಮಣಿಕಂಠ ಧೈರ್ಯದಿಂದ ಬ್ಯಾಗಿನ ಜಿಪ್ ಹಾಕಿದ್ದನು.


    ಅಂದು ಶಾಲೆ ಆರಂಭಗೊಳುತ್ತಿದ್ದAತೆ ನÀಲಿ-ಕಲಿ ತರಗತಿ ಶಿಕ್ಷಕ ಪಾಠ ಓದಲು ಸೂಚಿಸಿದಾಗ ಭವನ ಬ್ಯಾಗ್‌ನಿಂದ ಪುಸ್ತಕ ತೆಗೆಯುವ ಸಂದರ್ಭದಲ್ಲಿ ಬ್ಯಾಗಿನಲ್ಲಿ ಹಾವಿರುವುದನ್ನು ಸ್ನೇಹಿತ ಮಣಿಕಂಠನಿಗೆ ತೋರಿಸಿದ್ದಾನೆ. ತಕ್ಷಣ ಬ್ಯಾಗಿ ಜಿಪ್ ಎಳೆದು ಹಾವು ಹೊರಗೆ ಬಾರದಂತೆ ಜಾಗ್ರತೆ ವಹಿಸಿ ಬ್ಯಾಗ್ ಸಹಿತ ಶಿಕ್ಷಣನ ಬಿಳಿ ತೆರಳಿ ವಿಷಯ ತಿಳಿಸಿ ನಂತರ ಶಾಲೆ ಹತ್ತಿರವಿರುವ ಭುವನ ಪೋಷಕರ ಕರೆಯಿಸಿ ಶಿಕ್ಷಕ ಘಟನೆಯ ವಿವರ ನೀಡಿ, ಮಣಿಕಂಠ ಸಮಯ ಪ್ರಜ್ಞೆ ಹಾಗೂ ಧೈರ್ಯವನ್ನು ಶ್ಲಾಘಿಸಿ, ನಂತರ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು.

RIPPAN PETE:


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe