KANAJA:”ನಮ್ಮೂರ ಕಣಜ” ಜಾತ್ಯಾತೀತ ತತ್ವವನ್ನು ಆಧರಿಸಿ ತಂದಿರುವಂತ ಕೃತಿ: ಸುಧೀರ್ ಕುಮಾರ್ ಮೂರೂಳ್ಳಿ..

ಹೊಸನಗರ: ತಾಲೂಕಿನ ಸಾಂಸ್ಕೃತಿಕ ಸಂಕಥನ ಕ್ಕೇ ಸಾಕ್ಷಿಯಾಗಿರುವ ನಮ್ಮೂರ ಕಣಜ ಕೃತಿ ಜಾತ್ಯತೀತ ತತ್ವಗಳನ್ನ ಆಧರಿಸಿ ತಂದಿರುವಂತಹ ಕೃತಿಯಾಗಿದ್ದು ಇದಕ್ಕೆ ಜಾತ್ಯಾತೀತವಾದಂತಹ ಸಾಂವಿಧಾನಕ ಸ್ಪರ್ಶವನ್ನು ನೀಡಲಾಗಿದೆ ಎಂದು ವಾಗ್ಮಿ ಹಾಗೂ ನ್ಯಾಯವಾದಿಗಳಾದ ಸುಧೀರ್ ಕುಮಾರ್ ಮೂರೂಳ್ಳಿ ಅಭಿಪ್ರಾಯ ಪಟ್ಟರು.
ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮೂರ ಕಣಜ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿಯ ಕುರಿತು ಮಾತನಾಡಿದ ಅವರು
ಹೊಸನಗರಕ್ಕೆ ಸಾಂಸ್ಕೃತಿಕ, ಐತಿಹಾಸಿಕ, ಭೌಗೋಳಿಕ ಹಿನ್ನೆಲೆ ಇದ್ದರೂ ಸಹ ಈ ತಾಲೂಕು ರಾಜಕೀಯವಾಗಿ ನನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದೇವೆ ಅದು ಮರುಸ್ಥಾಪನೆಯಾಗಬೇಕು ಎಂಬ ಸ್ಪಷ್ಟವಾದ ಉಲ್ಲೇಖ ಈ ಕೃತಿಯಲ್ಲಿದ್ದು ಹೊಸನಗರ ತಾಲೂಕಿನ ಸಂಪೂರ್ಣ ಮಾಹಿತಿ ಇಲ್ಲಿನ ಸಂಸ್ಕೃತಿ, ಮುಳುಗಡೆ, ಚಳುವಳಿ, ಶಿಕ್ಷಣ, ಸಾಧಕ ಬಾದಕ ಹೀಗೆ ತಾಲೂಕಿನ ಕುರಿತಾದಂತ ಕಣಜ ಇದಾಗಿದ್ದು ಮುಂದಿನ ಪೀಳಿಗೆ ನನ್ನೂರು ಹೀಗೆಲ್ಲಾ ಇತ್ತು ಎಂಬ ಸ್ಪಷ್ಟ ಚಿತ್ರಣವನ್ನು ನೀಡುವಂತಹ ಕೃತಿಯಾಗಿದೆ ವಿಶೇಷವಾಗಿ ಈ ತಾಲೂಕನ್ನು ಆಳಿದಂತಹ 8 ಜನರ ಶಾಸಕರ ಸಂದರ್ಶನವಿದ್ದು ಅವರು ಈ ಕ್ಷೇತ್ರಕ್ಕೆ ನೀಡಿರುವಂತಹ ಕೊಡುಗೆಗಳನ್ನು ತಿಳಿಸಿರುವುದರ ಜೊತೆಗೆ ಮುಂದೆ ಕ್ಷೇತ್ರ ಮರು ಸ್ಥಾಪನೆಗೆ ಅವರ ಪಾತ್ರವೂ ಅವಶ್ಯವಿದೆ ಎಂಬುದನ್ನು ಹೇಳಿದೆ.

ಹಾಗೆ ಈ ಕೃತಿಯಲ್ಲಿ ಮಹಿಳಾ ಲೇಖಕಿಯರಿಗೂ ಅವಕಾಶವನ್ನು ನೀಡಿರುವುದು ಸ್ವಾಗತ ಅರ್ಹ 25 ವಯಸ್ಸಿನಿಂದ 85 ವಯಸ್ಸಿನ ಎಲ್ಲಾ ಲೇಖಕರ ಶ್ರದ್ಧೆ ಹಾಗೂ ಶ್ರಮ ಈ ಕಣಜವಾಗಿ ಹೊರಹೊಮ್ಮಿದ್ದು ಪ್ರಧಾನ ಸಂಪಾದಕ ಡಾ. ಕೆ. ಶ್ರೀಪತಿ ಹಳಗುಂದ ಅವರ ಹಲವು ವರ್ಷಗಳ ಕನಸು ಇಂದು ನನಸಾಗಿದೆ ಎಂದರು.
ಬಳಿಕ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ
ನನ್ನ ಕ್ಷೇತ್ರ ಕುರಿತಾದಂತಹ ಈ ಒಂದು ಕೃತಿ ಅದ್ಭುತವಾಗಿದ್ದು ಇದರಲ್ಲಿ ಮಲೆನಾಡಿನ ಅಭಿವೃದ್ಧಿಯ ಕುರಿತು ಚಿಂತನೆ ಇದೆ ಶಿಕ್ಷಣದ ಜೊತೆಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾಲೇಜುಗಳಲ್ಲಿ ನಡೆಯುತ್ತಿರಬೇಕು ಇದರಿಂದ ವಿದ್ಯಾರ್ಥಿ ಗಳು ಇಂತಹ ಕೃತಿ ಹಾಗೂ ಲೇಖನಗಳ ಬಗ್ಗೆ ಆಸಕ್ತರಾಗಿ ಮುಂದೊಂದು ದಿನ ಉತ್ತಮ ಲೇಖಕರಾಗಿ ಹೊರಹೊಮ್ಮಲಿದ್ದಾರೆ ಎಂದರು..
ಈ ಸಂದರ್ಭದಲ್ಲಿ ಪ್ರೊ. ಕಾಳೇಗೌಡ ನಾಗವರ ಕೃತಿಯನ್ನು ಬಿಡುಗಡೆಗೊಳಿಸಿದರು ಕಾಲೇಜಿನ ಪ್ರಾಂಶುಪಾಲರಾದ ಡಾ. ಉಮೇಶ್ ಕೆ, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿಎನ್. ಶಾಂತರಾಮ್ ಪ್ರಭು, ಜಿಲ್ಲಾ ಕಾಸಪಾ ಅದ್ಯಕ್ಷ ಡಿ ಮಂಜುನಾಥ್, ತಾ ಮ ನರಸಿಂಹ,ಕಲಗೋಡು ರತ್ನಾಕರ್, ಧರ್ಮರಾಜ್, ಸುನಿಲ್ ಕುಮಾರ್ ಸುವ್ವಿ ಪ್ರಕಾಶನ. ಮಾಸ್ತಿ ಕಟ್ಟೆ ಸುಬ್ರಹ್ಮಣ್ಯ, ಅಶ್ವಿನಿ ಕುಮಾರ್, ಕೃತಿಯ ಸಂಪಾದಕರಾದ ಡಾ.ಕೆ ಶ್ರೀಪತಿ ಹಳಗೊಂದ ಉಪಸ್ಥಿತರಿದ್ದರು.

KANAJA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe