SAGARA NEWS:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ, ಕಳಸವಳ್ಳಿ-ಅಂಬರಗೊಂಡ್ಲು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ: ಹರತಾಳು ಹಾಲಪ್ಪ..

ಹೊಸನಗರ: ಕಳಸವಳ್ಳಿ-ಅಂಬರಗೊಂಡ್ಲು  ಸೇತುವೆ ಉದ್ಘಾಟನಾ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ನಾಡಿಗೆ ಬೆಳಕು ನೀಡಿ ಸರ್ವಸ್ವವನ್ನು ಕಳೆದುಕೊಂಡ ಈ ಭಾಗದ ಸಂತ್ರಸ್ತರ ಆರು ದಶಕಗಳ ಕನಸು ನನಸಾಗುವ ಸಂದರ್ಭ ಸಮೀಪಿಸುತ್ತಿದ್ದು ಜುಲೈ 14 ರ ದಿನ ಆ ದಿನಕ್ಕೆ ಸಾಕ್ಷಿಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಸರ್ವರನ್ನು ಪತ್ರಿಕ ಾಗೋಷ್ಠಿಯ ಮೂಲಕ ಆಹ್ವಾನಿಸಿ ಮಾತನಾಡಿದ ಅವರು ಸಾಗರದ ನೆಹರು ಮೈದಾನದಲ್ಲಿ ಜು.14ರಂದು ಬೆಳಿಗ್ಗೆ 10.30ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಳೆಬಾಗಿಲು ಸಿಗಂದೂರು ಸೇತುವೆ ಲೋಕಾರ್ಪಣೆ ಮಾಡಲಿದ್ದು, ನಂತರ ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ
ಮಧ್ಯಾಹ್ನ 12ಕ್ಕೆ ನೆಹರು ಮೈದಾನದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತಿನ್ ಸಚಿವರು, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಸ್ಥಳೀಯ ಶಾಸಕರು ಸೇರಿ ನಿತಿನ್ ಗಡ್ಕರಿ, ಪ್ರಲ್ಲಾದ ಜೋಷಿ ಸೇರಿ ರಾಜ್ಯ ಸರ್ಕಾರದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಹಾಗೆಯೆ ಸೇತುವೆ ನಿರ್ಮಾಣಕ್ಕೆ ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರು ಸಂಸದರಾಗಿದ್ದಾಗ ಮನಸ್ಸು ಮಾಡದೆ ಹೋಗಿದ್ದರೆ ಸೇತುವೆ ಇಂದಿಗೂ ಕನಸಾಗಿಯೇ ಉಳಿಯುತ್ತಿತ್ತು ಅವರ ಸತತ ಪ್ರಯತ್ನ ಹಾಗೂ ಪರಿಶ್ರಮ ಜೊತೆಗೆ ಈ ಭಾಗದ ಜನರ ಹೋರಾಟ ಇಂದು ಈ ಸೇತುವೆ ನಿರ್ಮಾಣಕ್ಕೆ ಕಾರಣವಾಗಿದೆ ಎಂದರು.
ಇದು ಯಾವುದೇ ಪಕ್ಷ, ಜಾತಿ ಕಾರ್ಯಕ್ರಮವಲ್ಲ. ಸಾಗರ ಹೊಸ ನಗರ ಭಾಗದ ಜನರ ಹಲವು ದಶಕಗಳ ಕನಸಿನ ಕಾರ್ಯಕ್ರಮ ಆದ್ದರಿಂದ ಪ್ರತಿಯೊಬ್ಬರೂ ಪಕ್ಷಭೇದವಿಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿ ಆಗಬೇಕು ಎಂದು ವಿನಂತಿಸಿ ಕೊಂಡರು. ಈ ಪತ್ರಿಕಾಗೋಷ್ಠಿಯಲ್ಲಿ
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ಸುಬ್ರಹ್ಮಣ್ಯ ಮತ್ತಿ ಮನೆ  ಪ್ರಮುಖರಾದ ದೇವಾನಂದ್, ಉಮೇಶ್ ಕಂಚುಗಾರ್, ಆರ್ ಟಿ ಗೋಪಾಲ್, ಹಾಲಗದ್ದೆ ಉಮೇಶ್, ಮನೋದರ, ಮೋಹನ್ ಮಂಡನೀ ಮುಂತಾದವರು ಉಪಸ್ಥಿತರಿದ್ದರು...

SAGARA NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe