JENUKALLAMMA:ಶ್ರೀ ಜೇನುಕಲ್ಲಮ್ಮ ಶಿಲಾಮಯ ದೇವಸ್ಥಾನಕ್ಕೆ ಭಕ್ತರ ದೇಣಿಗೆ

ಹೊಸನಗರ: ದೀವರ ಜನಾಂಗದ ಆರಾಧ್ಯ ದೈವ ತಾಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವರ ನೂತನ ಶಿಲಾಮಯ ದೇವಾಲಯ ನಿರ್ಮಾಣ ಕಾರ್ಯಕ್ಕೆ ಸಾಗರ ತಾಲೂಕಿನ ಬೇಸೂರಿನ ಕಾನಗೋಡು ಕುಟುಂಬದವರು ರೂ 67,105 ಗಳನ್ನು
ಹಾಗೆಯೆ ರಾಜ್ಯ ಕೆಜಿಐಡಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಕುಮಾರ್ ಮಂಡಾನಿ ಅವರು ತಮ್ಮ ತಂದೆ ದಿವಂಗತ ಶೇಷನಾಯ್ಕರ ಸವಿ ನೆನಪಿಗಾಗಿ ರೂ 50 ಸಾವಿರ ದೇಣಿಗೆ ಹಣವನ್ನು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಸಮಿತಿ ಕಾರ್ಯದರ್ಶಿ ಕೋಡೂರು ವಿಜೇಂದ್ರರಾವ್ ಸದಸ್ಯರಾದ ಹರತಾಳು ರಾಮಚಂದ್ರ, ಸುಧೀರ್ ಭಟ್, ಅರ್ಚಕ ಭಾಸ್ಕರ್ ಜೋಯಿಸ್, ವಕೀಲ ಗುರುಮೂರ್ತಿ ಮಂಡಾನಿ ಇದ್ದರು...

JENUKALLAMMA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe